






ಬೆಳಾಲು: ಗ್ರಾಮದ ಪುರುಷರಬೆಟ್ಟು ನಿವಾಸಿ ರಾಜೇಶ್ ಪಿ.(30ವ) ಅವರ ಶವ ಬೆಳಾಲು ಗ್ರಾಮದ ಬಲಿಪೆ ನೇತ್ರಾವತಿ ನದಿಯಲ್ಲಿ ಪತ್ತೆಯಾದ ಘಟನೆ ಡಿ.30ರಂದು ನಡೆದಿದೆ.


ಘಟನೆಯ ವಿವರ: ಡಿ. 27ರಂದು ಬೆಳಿಗ್ಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಹಿಂದಿರುಗದೆ ನಾಪತ್ತೆಯಾಗಿದ್ದ ರಾಜೇಶ್ ಪಿ. ರವರ ಪತ್ತೆಗಾಗಿ ಅವರ ಮನೆಯವರು ಹಾಗೂ ಸ್ಥಳೀಯವರು ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾಗಿಲ್ಲ ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿ ನಂತರ ಹುಡುಕಾಡಿದಾಗ ಡಿ.30ರಂದು ಬೆಳಿಗ್ಗೆ ಬಲಿಕೆಯ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದೆ.
ಮೃತರು ತಂದೆ ಜಿನ್ನಪ್ಪ ಗೌಡ, ತಾಯಿ ಚನ್ನಕ್ಕ, ಸಹೋದರ ಪ್ರಶಾಂತ್ ಮತ್ತು ಸಹೋದರಿ ಗೀತಾ ಅವರನ್ನು ಅಗಲಿದ್ದಾರೆ.









