ರಾಷ್ಟ್ರಮಟ್ಟದ ಸ್ಪೆಲ್ ಬಿ ಗ್ರಾಂಡ್ ಫಿನಾಲೆ: ಸ್ಟಾರ್ ಲೈನ್ ಶಾಲೆಯ ಮಹಮ್ಮದ್ ಶಮ್ಮಾಝ್ ರಾಷ್ಟ್ರಕ್ಕೆ 20ನೇ ರ್‍ಯಾಂಕ್

0

ಮಂಜೊಟ್ಟಿ: ರಝಾ ಗಾರ್ಡನ್ ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯ 2ನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ಶಮ್ಮಾಝ್ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪೆಲ್. ಬಿ.ಗ್ರಾಂಡ್ ಫಿನಾಲೆಯಲ್ಲಿ ರಾಷ್ಟ್ರಕ್ಕೆ 20ನೇ ರ್‍ಯಾಂಕ್ ಪಡೆದು ಅದ್ವಿತೀಯ ಸಾಧನೆ ಮಾಡಿದ್ದಾರೆ. ಹಾಗೂ ಇದೇ ಶಾಲೆಯ 2ನೇ ತರಗತಿಯ ಮಹಮ್ಮದ್ ಶಯಾನ್ 105ನೇ ರ್‍ಯಾಂಕ್ ಪಡೆದಿದ್ದಾರೆ. ಶಮ್ಮಾಝ್ ಅವರು ಗುರುವಾಯನಕೆರೆಯ ಶಮಿಮಾ ಭಾನು ಮತ್ತು ಅಬ್ದುಲ್ ರಿಯಾಝ್ ದಂಪತಿಗಳ ಪುತ್ರರಾಗಿದ್ದಾರೆ. ಶಾಲೆಯ ಆಡಳಿತ ಟ್ರಸ್ಟ್, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here