ಪದ್ಮುಂಜ: ಪ್ರೌಢ ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ

0

ಪದ್ಮುಂಜ: ಸರಕಾರಿ ಪ್ರೌಢ ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಮಡಿವಾಳ ಅವರ ಅಧ್ಯಕ್ಷತೆಯಲ್ಲಿ ಡಿ. 27ರಂದು ನಡೆಯಿತು. ಶಾಲಾ ವಿದ್ಯಾರ್ಥಿನಿಗಳು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದಾನಿಗಳಾದ ಸದಾಶಿವ ಜೋಗಿ ಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಸ್. ಡಿ. ಎಂ. ಕಾಲೇಜಿನ ಕನ್ನಡ ಉಪಾನ್ಯಸಕ ದಿವಾಕರ ಕೊಕ್ಕಡ ದಿಕ್ಸೂಚಿ ಭಾಷಣ ಮಾಡಿ ವಿದ್ಯಾರ್ಥಿಗಳು ನೀವು ಇಂದೇ ಸಂಕಲ್ಪ ಮಾಡಬೇಕು, ನೀವು ಸಾಧನೆ ಮಾಡಬೇಕು. ಸಾಧನೆ ಮಾಡಿದರೆ ಏನನ್ನು ಸಾಧಿಸಬಹುದು. ನೀವು ಸಾಧಿಸಿದರೆ ಮುಂದೊಂದು ದಿನ ಸರಕಾರಿ ನೌಕರರಾಗಬಹುದು. ಆದರೆ ನೀವು ಯಾವಾಗಲೂ ಸಮಾಜ ಸೇವಕರಾಗಬೇಕೆ ಹೊರತು ಭ್ರಷ್ಟ ಅಧಿಕಾರಿಗಳಾಗಬಾರದು ಎಂದ ಅವರು ನಾವು ಬೇರೆ ಬೇರೆ ಭಾಷೆ ಜಾತಿ ಜನಾಂಗದ ವಿದ್ಯಾರ್ಥಿಗಳು ಇಲ್ಲಿ ಸೇರಿದ್ದೇವೆ ಆದರೆ ಜಾತಿ ಭಾಷೆ ಜನಾಂಗ ಎಂಬುದು ನಮ್ಮೊಳಗಿನ ಅಡ್ಡ ಗೋಡೆಯಾಗಬಾರದು ಎಂದರು.

ಅಧ್ಯಕ್ಷೀಯ ಭಾಷಣ ಮಾಡಿದ ಸೀತಾರಾಮ ಮಡಿವಾಳರವರು ಖಾಸಗಿ ವಿದ್ಯಾಸಂಸ್ಥೆಗಿಂತ ಉತ್ತಮ ರೀತಿಯಲ್ಲಿ ನಮ್ಮ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯುತ್ತಿದೆ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಎಲ್ಲರನ್ನೂ ನೆನಪಿಸಿಕೊಂಡರು. ದಾನಿಗಳಾದ ಸಂಪತ್ ಕುಮಾರ್ ಕೊಲ್ಲಾಜೆ, ಪದ್ಮುಂಜ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬೀರಾದರ್, ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಿತಿನ್ ಪಿ.ಎಸ್., ಅಕ್ಷತಾ ಪಣೆಕ್ಕರ, ಎಸ್. ಡಿ. ಎಂ. ಸಿ ಸದಸ್ಯರಾದ ಸತೀಶ್ ಶೆಟ್ಟಿ, ಶೋಭಾ ಸೀತಾರಾಮ ಮಡಿವಾಳ, ಅಬ್ದುಲ್ ರಝೂಖ್, ಪುರೋಷೋತ್ತಮ ಗೌಡ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಸುಮತಿ ಪಿ.ಎನ್. ರವರು ಪ್ರಾಸ್ತಾವಿಕವಾಗಿ ಮಾತನಾಡಿ 2025/26 ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕರಾದ ಆನಂದ, ವಿನಯಕುಮಾರ್, ಸವಿತಾ, ಅನಂತಕೃಷ್ಣ, ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಹಳೆ ವಿದ್ಯಾರ್ಥಿಗಳಾದ ಅಂಕಿತ್, ವಿಲಾಸ್ ಶೆಟ್ಟಿ ಸೇರಿದಂತೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಸಿಕೊಟ್ಟರು. ಎಸ್. ಡಿ. ಎಂ. ಸಿ ಉಪಾಧ್ಯಕ್ಷರಾದ ಯುವರಾಜ ಇಂದ್ರರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಶಿಕ್ಷಕಿ ಸುಧಾಮಣಿಯವರು ಸ್ವಾಗತ ಮಾಡಿದರು. ಶಿಕ್ಷಕಿಯರಾದ ಗಾಯತ್ರಿ ಹಾಗೂ ಸಂಧ್ಯಾರವರು ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ವಿವದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದೈಹಿಕ ಶಿಕ್ಷಕ ವಿನಯ್ ಕುಮಾರ್ ಧನ್ಯವಾದ ಸಲ್ಲಿಸಿದರು.
ವರದಿ ಕಾಸಿಂ ಪದ್ಮುಂಜ.

LEAVE A REPLY

Please enter your comment!
Please enter your name here