






ಕಾಯರ್ತಡ್ಕ: ಅಡ್ಕ ಟ್ರೋಫಿ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಡಿ. 20 ಮತ್ತು 21ರಂದು ಕಳೆಂಜ ಗ್ರಾಮದ ಮೂಡರು ಅಡ್ಕದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ದಿಲೀಪ್ ಕುಮಾರ್ ಕಟ್ಟೆಮನೆ, ಕರಿಯಪ್ಪ ಸ್ವಾಮಿ ಅಂಗರಂಡ ಮನೆ, ಗೋಪಾಲ ಪುಲ್ಲಾಯ, ಪಂಚಾಯತ್ ಉಪಾಧ್ಯಕ್ಷ ಮಂಜುನಾಥ್ ಗೌಡ ಹಾರಿತ್ತ ಕಜೆ, ಕಾಯರ್ತಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಿಜಯ್ ಕುಮಾರ್, ಪಂಚಾಯತ್ ಸದಸ್ಯ ಹರೀಶ್ ಕೆ. ಬಿ, ಶರತ್ ಮೂಡರು ಮುಂತಾದವರು ಆಗಮಿಸಿ ಆಟಗಾರರಿಗೆ ಶುಭಕೋರಿದರು. ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ನಿಡ್ಡಾಜೆ ಕೋಟಿ ಚೆನ್ನಯ್ಯ ತಂಡ ಪ್ರಥಮ ಸ್ಥಾನ ಪಡೆದು 10,000 ಮೊತ್ತ ಮತ್ತು ಟ್ರೋಫಿ ಪಡೆದುಕೊಂಡರು ರನ್ನರ್ ಆಫ್ ಪ್ರಶಸ್ತಿಯನ್ನು ಜೈ ತುಳುನಾಡು ಬಯಲು ತಂಡ 6000ಮೊತ್ತ ಮತ್ತು ಟ್ರೋಫಿ ಪಡೆದುಕೊಂಡರು.


ಕಾರ್ಯಕ್ರಮ ನಿರೂಪಣೆಯನ್ನು ಗಂಗಾಧರ ಭಂಡಾರಿ ನಡೆಸಿಕೊಟ್ಟರು. ಸಂತೋಷ ಪುದುವೆಟ್ಟು, ಫಯಾಸ್ ಬಯಲು, ರೆಹಮಾನ್ ಪುದುವೆಟ್ಟು ವೀಕ್ಷಕ ವಿವರಣೆ ನಡೆಸಿಕೊಟ್ಟರು.









