






ಅಳದಂಗಡಿ: ಕಾಂತಾರ 1 ಚಲನಚಿತ್ರದಲ್ಲಿ ಅಭಿನಯಿಸಿದ್ದ ಪ್ರಶಾಂತ್ ಶೆಟ್ಟಿ ಮತ್ತು ತಂಡದವರು ಡಿ.23ರಂದು ಅಳದಂಗಡಿಯ ಸತ್ಯದೇವತೆ ಸನ್ನಿಧಿಗೆ ಭೇಟಿ ನೀಡಿದರು. ರಾತ್ರಿ ನಡೆದ ಹರಕೆ ಕೋಲದ ಸಂದರ್ಭದಲ್ಲಿ ಭಾಗವಹಿಸಿ ದೈವದ ಗಂಧ ಪ್ರಸಾದ ಸ್ವೀಕರಿಸಿದರು. ಪ್ರಶಾಂತ್ ಶೆಟ್ಟಿ ರಂಗಭೂಮಿಯಲ್ಲಿ ತನ್ನ ಅದ್ಭುತ ನಟನೆಯ ಮೂಲಕ ಹೆಸರು ಮಾಡಿದ್ದು, ಅವರು ನೀನಾಸಂ ಪ್ರಶಾಂತ್ ಶೆಟ್ಟಿ ಎಂದೇ ಖ್ಯಾತಿ ಪಡೆದಿದ್ದಾರೆ.



ಸತ್ಯದೇವತಾ ದೈವಸ್ಥಾನದ ಆಡಳಿತ ಮೋಕ್ತೇಸರರಾದ ಶಿವಪ್ರಸಾದ್ ಅಜಿಲರವರು ಪ್ರಶಾಂತ್ ಶೆಟ್ಟಿಯವರನ್ನು ಗೌರವಿಸಿದರು.









