






ಧರ್ಮಸ್ಥಳ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಮತ್ತು ಮಾಣಿ ಸ್ಥಳೀಯ ಸಂಸ್ಥೆಯಿಂದ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಲೋತ್ಸವ-2025ರಲ್ಲಿ ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಲವು ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ.


ಬುಲ್ ಬುಲ್ ವಿಭಾಗದಲ್ಲಿ ಅಭಿನಯ ಗೀತೆಯಲ್ಲಿ ಶ್ರೇಯಸಿ ಹೆಚ್.ಎಸ್. ಪ್ರಥಮ, ಕಬ್ ವಿಭಾಗದಲ್ಲಿ ಕಥೆ ಹೇಳುವುದರಲ್ಲಿ ವಿಹಾನ್ ಮಯ್ಯ ಪ್ರಥಮ ಸ್ಥಾನ, ಗೈಡ್ ವಿಭಾಗದ ಭರತನಾಟ್ಯದಲ್ಲಿ ಅನನ್ಯ ಎಂ.ಡಿ ತೃತೀಯ, ಗೈಡ್ ವಿಭಾಗದಲ್ಲಿ ಪ್ರಬಂಧ ರಚನೆ ಶ್ರೇಯ ರೈ ದ್ವಿತೀಯ, ಸ್ಕೌಟ್ಸ್ ವಿಭಾಗದಲ್ಲಿ ಶ್ರವಣ್ ಬಿ.ಜೆ. ಮಿಮಿಕ್ರಿಯಲ್ಲಿ ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳಿಗೆ ಶಾಲಾ ಸ್ಕೌಟ್ ಗೈಡ್ ಕಬ್ ಬುಲ್ ಬುಲ್ ಶಿಕ್ಷಕರು ಹಾಗೂ ಶಾಲಾ ಸಹ ಶಿಕ್ಷಕರು ತರಬೇತಿ ನೀಡಿದ್ದಾರೆ.









