ಕಲ್ಲೇರಿ: ನವಚೇತನ ತೋಟಗಾರಿಕೆ ರೈತ ಉತ್ಪಾದಕರ ಕಂಪೆನಿಗೆ ನಿರ್ದೇಶಕರ ಆಯ್ಕೆ

0

ಬೆಳ್ತಂಗಡಿ: ಕಲ್ಲೇರಿ ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ಇದರ ಬಾರ್ಯ ಗ್ರಾಮದ ಕಂಪೆನಿಯ ನಿರ್ದೇಶಕರಾಗಿ ಬಾಲಕೃಷ್ಣ ಶೆಟ್ಟಿ ಸುಣ್ಣಾಜೆ ಮತ್ತು ಮೊಗ್ರು ಗ್ರಾಮದಿಂದ ಕಂಪೆನಿಯ ನಿರ್ದೇಶಕರಾಗಿ ಉಮಾವತಿ ಉಳಿಯ ಆಯ್ಕೆಯಾಗಿರುತ್ತಾರೆ.

ಆಯ್ಕೆಯ ಸಮಯದಲ್ಲಿ ಬಾರ್ಯ ಮತ್ತು ಮೊಗ್ರು ಗ್ರಾಮದ ಸದಸ್ಯರು ಹಾಜರಿದ್ದರು. ಮತ್ತು ಕಂಪೆನಿಯ ಅಧ್ಯಕ್ಷ ಲಿಂಗಪ್ಪ ನಾಯ್ಕ ಉರುವಾಲು, ಉಪಾಧ್ಯಕ್ಷ ತಿಮ್ಮಯ್ಯ ಗೌಡ ಪದ್ಮುಂಜ ಹಾಗೂ ನಿರ್ದೇಶಕರಾದ ವಾಸಪ್ಪ ಗೌಡ, ಯೋಗಿಶ್ ಪೂಜಾರಿ, ಮೋನಪ್ಪ ಗೌಡ, ದಯಾನಂದ ಪಿ. ಹಾಗೂ ಕಂಪೆನಿಯ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕೆ. ನಾರಾಯಣ ಶೆಟ್ಟಿ ಮತ್ತು ಕಂಪೆನಿಯ ಲೆಕ್ಕಿಗರಾದ ನಿತಿನ್ ಕುಮಾರ್ ರವರು ಸಹಕರಿಸಿದರು.

LEAVE A REPLY

Please enter your comment!
Please enter your name here