






ಬೆಳ್ತಂಗಡಿ: ಮಂಗಳೂರು/ಬಿ.ಸಿ.ರೋಡ್ ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ವಿವಿಧೋದ್ದೇಶ ಸಹಕಾರಿ ಸಂಘದ ಆರ್ಥಿಕ ವರ್ಷ 2025 -26ರಿಂದ 2029-30ನೇ ಸಾಲಿನ ನೂತನ ಆಡಳಿತ ಮಂಡಳಿಗೆ ಚುನಾವಣಾ ಪ್ರಕ್ರೀಯೆಯು ಪೂರ್ಣಗೊಂಡಿದ್ದು ಆಡಳಿತ ಮಂಡಳಿಗೆ 14 ಮಂದಿ ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದು ನೂತನ ಆಡಳಿತ ಮಂಡಳಿಯಲ್ಲಿ ಪುರುಷೋತ್ತಮ ಕೆ. ಭಂಡಾರಿಯವರು ಸಹಕಾರಿ ಸಂಘದ ಅಧ್ಯಕ್ಷರಾಗಿ ಮತ್ತು ಜಯಪ್ರಕಾಶ್ ಶೆಟ್ಟಿಯವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಯಾದರು.


ಸಹಕಾರ ಇಲಾಖೆಯ ಬಿ. ನಾಗೇಂದ್ರ ಅವರು ಚುನಾವಣಾ ಪ್ರಕ್ರೀಯೆಗಳನ್ನು ನಡೆಸಿ ಅಧ್ಯಕ್ಷ /ಉಪಾಧ್ಯಕ್ಷರ ಮತ್ತು ನಿರ್ದೇಶಕರ ಆಯ್ಕೆಯನ್ನು ಘೋಷಿಸಿ ಪ್ರಮಾಣ ಪತ್ರಗಳನ್ನು ವಿತರಿಸಿದರು. ನಿರ್ದೇಶಕ ಮಂಡಳಿಯಲ್ಲಿ ಪುರುಷೋತ್ತಮ ಕೆ. ಭಂಡಾರಿ (ಅಧ್ಯಕ್ಷರು) ಜಯಪ್ರಕಾಶ್ ಶೆಟ್ಟಿ (ಉಪಾಧ್ಯಕ್ಷರು) ಎಂ. ಜಯರಾಮ ಭಂಡಾರಿ, ಕೊಡಂಗೆ ಬಾಲಕೃಷ್ಣ ನಾಯ್ಕ್, ಸ್ಟ್ಯಾನಿ ಡಿಸೋಜ, ವಿಶ್ವನಾಥ ಗಟ್ಟಿ ಎ., ಕಾಶೀನಾಥ್ ಪುತ್ರನ್, ಮಹಾಲಿಂಗೇಶ್ವರ ಭಟ್ ಬಿ., ಲೀಲಾವತಿ ಕೆ., ರಾಜೀವಿ ವಿ., ಮೃಣಾಲಿನಿ, ಶ್ರೀನಿವಾಸ ಕಣ್ವತೀರ್ಥ, ಎಚ್. ಸುಬ್ರಹ್ಮಣ್ಯ ಭಟ್ ಮತ್ತು ಕಿಶೋರ್ ಕುಟಿನ್ಹ ನಿರ್ದೇಶಕರಾಗಿ ಆಯ್ಕೆಯಾದರು. ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಾಂತ್ ಸಿ.ಎಚ್. ಮತ್ತು ಸಿಬ್ಬಂದಿಗಳು ಸಹಕರಿಸಿದರು.









