



ಬೆಳ್ತಂಗಡಿ: ತಾಲೂಕು ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಬಹಳಷ್ಟು ಖ್ಯಾತಿ ಪಡೆದಿರುವ “ಸಾಲ್ಯಾನ್ ಎಲ್ ಇಡಿ” ಇಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಮಾಣಪತ್ರವನ್ನು ತನ್ನದಾಗಿಸಿಕೊಂಡಿದೆ. ಮಂಗಳೂರಿನಲ್ಲಿ ನಡೆದ ದಿ| ಕಿಶೋರ್‌ಕುಮಾರ್‌ಹಾಡುಗಳ ಗಾಯನ ದಾಖಲೆ, 100 ಗಾಯಕರು, ನಿರಂತರ 40 ಗಂಟೆಗಳ ಕಾಲ ಕರೋಕೆ ಸ್ವರೂಪದ ಗಾಯನ ಸ್ಪರ್ಧೆಯಲ್ಲಿ ಸಾಲ್ಯಾನ್ ಎಲ್ ಇಡಿ ಮಾಲಕ ಸುದೀಪ್ ಅವರು ತಮ್ಮ ಎಲ್ ಇಡಿ ಪ್ರದರ್ಶನವನ್ನು ಮಾಡುವ ಮೂಲಕ ಈ ದಾಖಲೆಯ ಪಾಲು ಪಡೆದಿದ್ದಾರೆ. ಸುದೀಪ್ ಸಾಲ್ಯಾನ್ ರವರು ಧ್ವನಿ ನ್ಯೂಸ್ ಚಾನೆಲ್ ನ ಪ್ರಧಾನ ಸಂಪಾದಕರಾಗಿದ್ದಾರೆ.


ಮಂಗಳೂರು ಪುರಭವನದಲ್ಲಿ ಷೋಡಶಿ ಫೌಂಡೇಶನ್ ನೇತೃತ್ವದಲ್ಲಿ’ಗಾತಾ ರಹೇ ಮೇರಾ ದಿಲ್’ ಎಂಬ ಹೆಸರಿನಲ್ಲಿ ದಿ| ಕಿಶೋರ್ ಕುಮಾರ್ ಅವರು ಹಾಡಿದ ಹಾಡುಗಳನ್ನು ಬರೋಬ್ಬರಿ 100 ಗಾಯಕರು ನಿರಂತರ 40 ಗಂಟೆ ‘ಕರೋಕೆ’ ಸ್ವರೂಪದಲ್ಲಿ ಹಾಡುವ ಮೂಲಕ ವಿಶ್ವದಾಖಲೆಯ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ನಲ್ಲಿ ಹೆಸರು ನಮೂದಿಸಿದ್ದಾರೆ. ಈ ವಿಶ್ವದಾಖಲೆಯಲ್ಲಿ ಸಾಲ್ಯಾನ್ ಎಲ್ ಇಡಿ ಉತ್ತಮವಾಗಿ ಕಾರ್ಯನಿರ್ವಹಿಸಿತ್ತು. ಇದೀಗ ಈ ಸಾಧನೆಗೆ ಸುದೀಪ್ ಸಾಲ್ಯಾನ್ ಅವರಿಗೆ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ವತಿಯಿಂದ ಪದಕ, ಸರ್ಟಿಫಿಕೇಟ್ ನೀಡಿ ಗೌರವಿಸಲಾಗಿದೆ.









