ಬಳಂಜ: ಸ.ಉ.ಹಿ.ಪ್ರಾ. ಮತ್ತು ಪ್ರೌ. ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಸಂಭ್ರಮ- 2025:ಬಳಂಜ ಶಾಲೆ ಉತ್ತುಂಗಕ್ಕೆ ಏರುತ್ತಿದೆ: ಡಾ. ಪದ್ಮಪ್ರಸಾದ್ ಅಜಿಲ-ಶಾಲಾಭಿವೃದ್ಧಿಯಲ್ಲಿ ಸರ್ವರ ಪಾತ್ರ ರಾಜಕೀಯ ರಹಿತವಾಗಿ ಇರಲಿ: ಶಶಿಧರ ಶೆಟ್ಟಿ ಬರೋಡ-ಬಳಂಜದ ಹಳೆ ವಿದ್ಯಾರ್ಥಿ ಸಂಘ ಎಲ್ಲರಿಗೂ ಪ್ರೇರಣೆ: ಶಾಸಕ ಹರೀಶ್ ಪೂಂಜ

0

ಬೆಳ್ತಂಗಡಿ: ಬಳಂಜ ಸರಕಾರಿ ಉನ್ಬತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಮೃತ ಮಹೋತ್ಸವ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಇದರ ಸಹಯೋಗದಲ್ಲಿ ಡಿ.13ರಂದು ನಡೆದ ಅಮೃತ ಮಹೋತ್ಸವ ಅಮೃತ ಸಂಭ್ರಮ-2025 ಕಾರ್ಯಕ್ರಮವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ|ಪದ್ಮಪ್ರಸಾದ್ ಅಜಿಲ ಉದ್ಘಾಟಿಸಿದರು. ಕೀರ್ತಿ ಶೇಷ ಪಟೇಲ್ ಕಿನ್ನಿ ಯಾನೆ ಕೋಟಿ ಪಡಿವಾಳ್ ಸಭಾ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಸಭಾಧ್ಯಕ್ಷತೆ ವಹಿಸಿದ್ದರು.

ಅಳದಂಗಡಿಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ಮಾತನಾಡಿ ಶಾಲೆಯ ಅಮೃತ ಮಹೋತ್ಸವದ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಕೂಡಿದೆ. ಶಾಲಾಭಿವೃದ್ಧಿಗೆ ಊರ ಗಣ್ಯರ, ಉದ್ಯಮಿಗಳ ಕೊಡುಗೆಯಿಂದ ಬಳಂಜ ಶಾಲೆ ಉತ್ತುಂಗಕ್ಕೆ ಏರುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವಲ್ಲಿ ಶಿಕ್ಷಕರ ಮೇಲಿರುವಷ್ಟೇ ಜವಾಬ್ದಾರಿ ಊರಿನವರ ಮೇಲೆಯೂ ಇದೆ ಎಂದು ಶುಭ ಹಾರೈಸಿದರು.

ಮಕ್ಕಳ ಬಸ್ ನಿಲ್ದಾಣ, ಮುಖ್ಯದ್ವಾರ ಉದ್ಘಾಟನೆ: ಬಳಂಜ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ಶಾಸಕ‌ರ ನಿಧಿಯಿಂದ ನಿರ್ಮಾಣವಾದ ಮಕ್ಕಳ ಬಸ್ ನಿಲ್ದಾಣ ಹಾಗೂ ಶಾಲೆಯ ಮುಖ್ಯಧ್ವಾರವನ್ನು ಶಾಸಕ ಹರೀಶ್ ಪೂಂಜರು, ತಿಮ್ಮಣ್ಣರಸರಾದ ಡಾ|ಪದ್ಮಪ್ರಸಾದ್ ಅಜಿಲರು ಹಾಗೂ ನಿರ್ದೇಶಕ ವಿನು ಬಳಂಜರ ಘನ ಉಪಸ್ಥಿತಿಯಲ್ಲಿ ಉದ್ಟಾಟಿಸಿದರು. ಅಮೃತ ಮಹೋತ್ಸದ ಧ್ವಜರೋಹಣವನ್ನು ಸರಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಕೆ.ವಸಂತ್ ಸಾಲ್ಯಾನ್ ನೆರವೇರಿಸಿದರು.

ಬಳಂಜ ಗ್ರಾ.ಪಂ. ಅಧ್ಯಕ್ಷೆ ಶೋಭಾ ಕುಲಾಲ್, ಶಾಲಾಭಿವೃದ್ಧಿ ಸಮಿತಿಯ ಎಸ್.ಡಿ.ಎಂ.ಸಿ ಸರಕಾರಿ ಪ್ರೌಢ ಶಾಲೆಯ ಕಾರ್ಯಾಧ್ಯಕ್ಷ ಕೆ.ವಸಂತ್ ಸಾಲ್ಯಾನ್, ಉದ್ಯಮಿ ನವಶಕ್ತಿ ಶಶಿಧರ್ ಶೆಟ್ಟಿ ಬರೋಡ,
ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಡಾ|ಎನ್ ಎಂ ತುಳುಪುಲೆ, ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಪಿ.ಕೆ, ಗೌರವಾಧ್ಯಕ್ಷ ಸುರೇಶ್ ಶೆಟ್ಟಿ ಕುರೇಲ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹರೀಶ್, ಅಳದಂಗಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ, ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನು ಬಳಂಜ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರತ್ಕಾಕರ್, ಕೀರ್ತಿಶೇಷ ಪಟೇಲ್ ಕಿನ್ನಿ ಯಾನೆ ಕೋಟಿ ಪಡಿವಾಳ್ ಮನೆತನದ ಯುವರಾಜ್ ಪಡಿವಾಳ್, ಬಳಂಜ ಸ.ಉ.ಹಿ.ಪ್ರಾ. ಮತ್ತು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಂಗಸ್ವಾಮಿ ಸಿ.ಆರ್., ಹೈಸ್ಕೂಲು ಮುಖ್ಯ ಉಪಾಧ್ಯಾಯಿನಿ ಸುಲೋಚನಾ, ಬಳಂಜ ಗ್ರಾ.ಪಂ. ಸದಸ್ಯೆ ಸುಚಿತ್ರಾ, ಶಾಲಾ ಮುಖ್ಯಮಂತ್ರಿಗಳಾದ ಜೋವಿಟಾ ಮತ್ತು ಅನಿತಾ ಉಪಸ್ಥಿತರಿದ್ದರು.

ಅಮೃತ ಮಹೋತ್ಸವ ಸಮಿತಿಯ ಪ್ರದಾನ ಸಂಚಾಲಕ ಅಶ್ವತ್ ಹೆಗ್ಡೆ ಸ್ವಾಗತಿಸಿದರು. ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here