




ಪುದುವೆಟ್ಟು: ಗ್ರಾಮದ ಮೇಲ್ನಾಡ್ಕ ಎಂಬಲ್ಲಿ ಊರಿನ ಹಿರಿಯರಾದ ಸುಂದರ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸಿ ದಿವ್ಯ ಜ್ಯೋತಿ ಎಂಬ ಭಜನಾ ಮಂಡಳಿ ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ಧರ್ಮಸ್ಥಳ ಭಜನಾ ಪರಿಷತ್ತಿನ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಹಾಗೂ ಕುಣಿತ ಭಜನಾ ಗುರುಗಳಾದ ನಾಗೇಶ್ ಬಿ ನೆರಿಯ ಹಾಗೂ ಭಜನಾ ಸಂಚಾಲಕರಾದ ಉಮೇಶ್ ಪೂಜಾರಿ ಮತ್ತು ಜಯಲಕ್ಷ್ಮಿ ಹಾಗೂ ಭಜನಾ ತರಬೇತಿದಾರರಾದ ಮಾಲಿನಿ ಹೆಗ್ಡೆ ಊರಿನ ಭಜನಾ ತರಬೇತಿ ಪಡೆಯಲು ಬಂದ ಮಕ್ಕಳು ಹಾಗೂ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.









