ಉಜಿರೆಯ ಪಂಚಮಿ ಕಾಂಪ್ಲೆಕ್ಸ್ ನಲ್ಲಿ ಪ್ರೀಮಿಯಂ ಟಯರ್ಸ್ ಶುಭಾರಂಭ

0

ಉಜಿರೆ: ಪಂಚಮಿ ಕಾಂಪ್ಲೆಕ್ಸ್ ನಲ್ಲಿ ಪ್ರೀಮಿಯಂ ಟಯರ್ಸ್ ಶುಭಾರಂಭವು ನ. 28ರಂದು ನಡೆಯಿತು. ಉದ್ಘಾಟನೆಯನ್ನು ಮಾಜಿ ಸಚಿವರು, ಕರ್ನಾಟಕ ಸರಕಾರ ಕೆ. ಗಂಗಾಧರ ಗೌಡ ನೆರವೇರಿಸಿ ಶುಭ ಹಾರೈಸಿದರು.

ಉಜಿರೆಯಲ್ಲಿ ಪ್ರಪ್ರಥಮ ಬಾರಿಗೆ ವಿನೂತನ ಮತ್ತು ವೈವಿಧ್ಯಮಯ ಟಯರ್‌ಗಳ ನೂತನ ಮಳಿಗೆ ವಿದೇಶಿ ಆಮದಿತ ಎಲ್ಲಾ ಬ್ರಾಂಡ್‌ಗಳ ಸೆಕೆಂಡ್ಸ್ ಮತ್ತು ರೀಸೋಲ್ ಟಯರ್‌ಗಳು ಇಲ್ಲಿ ಲಭ್ಯ. ಉತ್ಕೃಷ್ಟ ಗುಣ ಮಟ್ಟ, ಸ್ವರ್ಧಾತ್ಮಕ ದರ ಇಲ್ಲಿಯ ವೈಶಿಷ್ಟ್ಯ.

ಬೆಳ್ತಂಗಡಿ ಪೋಲಿಸ್ ಠಾಣೆಯ ಪೋಲಿಸ್ ವೃತ್ತ ನಿರೀಕ್ಷಕ ಸುಬ್ಬಾಪುರ ಮಠ ದೀಪದ ಪ್ರಜ್ವಲನ ಮಾಡಿದರು. ಮಾಲಕರಾದ ದೀಪು, ಸುನಿಲ್ ಆಗಮಿಸಿದ ಗಣ್ಯರಿಗೆ ಸ್ವಾಗತಿಸಿದರು.
ದೀಪು ಮರಿಯಾ, ಡೇರಿಕ್, ಬಿಜು ನೀಲಿಯರ ಮೊದಲಾದವರು ಉಪಸ್ಥಿತರಿದ್ದರು. ಪ್ರಕಾಶ್ ಪಿಂಟೊ ವಂದಿಸಿದರು.

LEAVE A REPLY

Please enter your comment!
Please enter your name here