614 ಕೋಟಿ ರೂ. ವೆಚ್ಚದ ಉಜಿರೆ – ಪೆರಿಯಶಾಂತಿ ಸ್ಪರ್ ರಸ್ತೆಗೆ ಧರ್ಮಸ್ಥಳದಲ್ಲಿ ಶಿಲಾನ್ಯಾಸ-ಜಿಲ್ಲೆಗೆ ಸಂಬಂಧಪಟ್ಟ ರಸ್ತೆಯಲ್ಲ ಇಡೀ ರಾಜ್ಯಕ್ಕೆ ಸಂಬಂಧಪಟ್ಟ ರಸ್ತೆ: ಡಾ. ಹೆಗ್ಗಡೆ

0

ಬೆಳ್ತಂಗಡಿ : ಉಜಿರೆ- ಧರ್ಮಸ್ಥಳ -ಪೆರಿಯಶಾಂತಿ ಸ್ಟರ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ನ.22 ರಂದು ಧರ್ಮಸ್ಥಳ ದ್ವಾರದ ಬಸ್ ನಿಲ್ದಾಣ ಬಳಿ ಶಿಲಾನ್ಯಾಸ ಕಾರ್ಯಕ್ರಮವನ್ನು ರಾಜ್ಯಸಭಾ ಸದಸ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರ ನೆರವೇರಿಸಿ ಮಾತನಾಡಿ. ಈ ರಸ್ತೆಯು ಜಿಲ್ಲೆಗೆ ಸಂಬಂಧಪಟ್ಟ ರಸ್ತೆಯಲ್ಲ ಇಡೀ ರಾಜ್ಯಕ್ಕೆ ಸಂಬಂಧಪಟ್ಟ ರಸ್ತೆ ಇದೊಂದು ಕೇಂದ್ರ ಸರ್ಕಾರದ ಒಳ್ಳೆಯ ಯೋಜನೆ ಸ್ವಾಮಿಯ ಅನುಗ್ರಹದಿಂದ ಯಶಸ್ವಿಯಾಗಲಿದೆ ಎಂದರು.

ರೂ.614 ಕೋಟಿ ವೆಚ್ಚದ ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಲಾಖೆಯ ಹೆದ್ದಾರಿಗಳ ನಿರ್ವಹಣೆ ಯೋಜನೆಯಲ್ಲಿ 30 ಕಿ.ಮೀ. ವ್ಯಾಪ್ತಿಯ ಈ ಸ್ಪರ್ ರಸ್ತೆ ಅಭಿವೃದ್ಧಿ ಹೊಂದಲಿದೆ. ಕಾಮಗಾರಿಯಲ್ಲಿ ರಸ್ತೆ ವಿಸ್ತರಣೆಗೊಳ್ಳಲಿದ್ದು, ಕಾಮಗಾರಿಯು ಪೂರ್ಣಗೊಂಡ ನಂತರ 2 km ಹತ್ತಿರ ಹತ್ತಿರವಾಗಿದೆ.

ಸುಸಜ್ಜಿತ ಚರಂಡಿಗಳು, ಅಗತ್ಯ ಸ್ಥಳಗಳಲ್ಲಿ ಕಿರು ಸೇತುವೆ, ಸೇತುವೆಗಳು ಧರ್ಮಸ್ಥಳದ ಮುಖ್ಯದ್ವಾರದ ಬಳಿ ಬೆಂಗಳೂರು ಮೆಜೆಸ್ಟಿಕ್ ಮಾದರಿಯ ಅಂಡರ್ ಪಾಸ್, ರಾತ್ರಿಯ ಸಂಚಾರ ಸುರಕ್ಷತೆಗೆ ಪೇಟೆ ಪ್ರದೇಶಗಳಲ್ಲಿ ವಿಶೇಷ ವಿದ್ಯುತ್ ದೀಪಗಳ ಅಳವಡಿಕೆಯಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿಯ ನಿವೃತ್ತ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲರು ತಿಳಿಸಿದರು.

ದೇಶದ ಪ್ರಧಾನಿ ನರೇಂದ್ರ ಮೋದಿಯ ಅವಧಿಯಲ್ಲಿ ನಿಖಿಲ್ ಗಡ್ಕರಿಯವರು ರಾಷ್ಟ್ರೀಯ ಹೆದ್ದಾರಿಯ ಚುಕ್ಕಾಣಿ ಹಿಡಿದ ನಂತರ ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಬರುವ ರಾಷ್ಟೀಯ ಹೆದ್ದಾರಿಗಳು ಚತುಸ್ಪದ ರಸ್ತೆಯನ್ನು ಕಾಣುವ ಭಾಗ್ಯ ಬಂದಿದೆ. ಕಾಮಗಾರಿಯನ್ನು MCK ಕೊಟ್ಟ ನಂತರ ವೇಗವನ್ನು ಕಾಣುತ್ತಿದೆ,
ಕರ್ನಾಟಕದ ದಕ್ಷಿಣ ಭಾರತದಲ್ಲಿ ಮೊದಲ ಸ್ಪರ್ ರಸ್ತೆಯನ್ನು ಘೋಷಣೆ ಮಾಡಿರುವುದು ಉಜಿರೆಯಿಂದ ಪೆರಿಯಶಾಂತಿ ರಸ್ತೆಗೆ ಇದಕ್ಕೆ ಸಹಕಾರವನ್ನು ಪೂಜ್ಯ ಖಾವಂದರು ಮಾಡಿದ್ದಾರೆ.

ದ. ಕ ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ರಾಜ್ಯದಲ್ಲಿಯೇ ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೂರು ಟೆಂಡರ್ ಪ್ರಕ್ರಿಯೆಯಾಗಿದೆ ಇದು ತಾಲೂಕಿನ ಭಾಗ್ಯ.
4 ವರ್ಷಗಳ ಹಿಂದೆ ರಾಜ್ಯ ಹೆದ್ದಾರಿ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹಸ್ತಾಂತರಗೊಂಡಿದೆ. ಬಳಿಕ ಸಾಕಷ್ಟು ಸಮೀಕ್ಷೆಗಳು ನಡೆದಿವೆ.

ಐತಿಹಾಸಿಕ ಕ್ಷೇತ್ರಗಳನ್ನು ಸಂಪರ್ಕಿಸುವ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಅಥವಾ ಒಂದು ರಾಷ್ಟ್ರೀಯ ಹೆದ್ದಾರಿಯಿಂದ ಇನ್ನೊಂದು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಅಥವಾ ಒಂದು ಪ್ರಮುಖ ರಸ್ತೆಯನ್ನು ಸಂಪರ್ಕಿಸುವ ಒಳದಾರಿಗಳನ್ನು ಮೇಲ್ದರ್ಜೆಗೇರಿಸುವ ಸ್ಪರ್ ಯೋಜನೆಯಡಿ ನಡೆಯಲಿರುವ ಈ ಕಾಮಗಾರಿಯಿಂದ ಮುಂದಿನ ದಿನಗಳಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರಗಳನ್ನು ಸಂದರ್ಶಿಸುವವರಿಗೆ ಅನುಕೂಲವಾಗಲಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದರು.

ವೇದಿಕೆಯಲ್ಲಿ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಸಂಘದ ನಿರ್ದೇಶಕ ಕುಶಾಲಪ್ಪ ಗೌಡ, ಬೆಳಾಲು ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ, ಉಜಿರೆ ಪಂಚಾಯತ್ ಅಧ್ಯಕ್ಷೆ ಉಷಾ ಕಾರಂತ್, ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ ಗೌಡ, ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ, ಪುದುಬೆಟ್ಟು ಅಧ್ಯಕ್ಷ ಪೂರ್ಣಕ್ಷ, ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರೀತಮ್, ಹಾಗೂ ಗ್ರಾಮ ಪಂಚಾಯತ್ ಪಟ್ರಮೆ, ಕೊಕ್ಕಡ ಅಧ್ಯಕ್ಷರು ಉಪಸ್ಥಿತರಿದ್ದರು.

ಪ್ರಮುಖರಾದ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಧರ್ಮಸ್ಥಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ, ಮತ್ತು ಅನೇಕ ಗಣ್ಯರು ಭಾಗವಹಿಸಿದ್ದರು.
ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಸ್ವಾಗತಿಸಿ, ಕೊಕ್ಕಡ ಯೋಗೀಶ್ ಅಣಂಬಿಲ ವಂದಿಸಿದರು.

LEAVE A REPLY

Please enter your comment!
Please enter your name here