





ಕಕ್ಯೆಪದವು: ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ , ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲಾ ವಿಭಾಗ ವಾಮದಪದವು ಇವರ ಜಂಟಿ ಆಶ್ರಯದಲ್ಲಿ 2025-26 ನೇ ಸಾಲಿನ ವಾಮದಪದವು ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಕಲೋತ್ಸವ ನ.8 19ರಂದು ನಡೆಯಿತು.
ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿದ್ಯಾರ್ಥಿಗಳು ವಲಯ ಮಟ್ಟದ ಕಲೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿ ಅಮೋಘ ಸಾಧನೆಯನ್ನು ಮಾಡಿರುತ್ತಾರೆ.

ಕವನ ವಾಚನ ಸ್ಪರ್ಧೆ ಮತ್ತು ಚರ್ಚಾಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಪ್ರತಿಕ್ಷಾ ಪ್ರಥಮ ಸ್ಥಾನ, ಇಂಗ್ಲೀಷ್ ಭಾಷಣದಲ್ಲಿ ಒಂಬತ್ತನೇ ತರಗತಿಯ ಸಮನ್ವಿ ಎಚ್.ಕೆ. ಪ್ರಥಮ ಸ್ಥಾನ, ಭಾವಗೀತೆ ಸ್ಪರ್ಧೆಯಲ್ಲಿ ಎಂಟನೇ ತರಗತಿಯ ತನ್ವಿ ಜೆ.ಪಿ. ಪ್ರಥಮ ಸ್ಥಾನ, ಜನಪದ ಗೀತೆ ಸ್ಪರ್ಧೆಯಲ್ಲಿ ಒಂಬತ್ತನೇ ತರಗತಿಯ ಹಿತೇಶ್ ಟಿ ಆರ್ ದ್ವಿತೀಯ ಸ್ಥಾನ ಹಾಗೂ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಒಂಬತ್ತನೇ ತರಗತಿಯ ಅಧಿತಿ ಎಂ. ಪ್ರಭು ದ್ವಿತೀಯ ಸ್ಥಾನವನ್ನು ಪಡೆದು ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.
ಒಟ್ಟು 4 ಪ್ರಥಮ ಹಾಗೂ 2 ದ್ವಿತೀಯ ಬಹುಮಾನಗಳನ್ನು ಪಡೆಯುವುದರ ಮೂಲಕ ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯು ವಲಯ ಮಟ್ಟದ ಕಲೋತ್ಸವದ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು,
ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ 6 ವಿದ್ಯಾರ್ಥಿಗಳು ತಾಲೂಕು ಮಟ್ಟದ ಕಲೋತ್ಸವಕ್ಕೆ ಆಯ್ಕೆಯಾಗಿರುತ್ತಾರೆ. ಭಾಗವಹಿಸಿದ ಹಾಗೂ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರು, ಮುಖ್ಯ ಶಿಕ್ಷಕಿ ಹಾಗೂ ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿ ಶುಭ ಹಾರೈಸಿದರು.








