




ಕುವೆಟ್ಟು: ಓಡಿಲ್ನಾಳ ಗ್ರಾಮ ಸಮಿತಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಮಹಿಳಾ ಬಿಲ್ಲವ ವೇದಿಕೆ, ಯುವ ಬಿಲ್ಲವ ವೇದಿಕೆ ಆಶ್ರಯದಲ್ಲಿ ನಡೆಯುವ ಕೋಟಿ ಚೆನ್ನಯ ಕ್ರೀಡಾಕೂಟದ ಸಮಾಲೋಚನೆ ಸಭೆ ಹಾಗೂ ಆಮoತ್ರಣ ಪತ್ರಿಕೆ ಬಿಡುಗಡೆ ನ.20ರoದು ಜಗನ್ನಾಥ ಬoಗೇರ ಹೇರಾಜೆ ಕುವೆಟ್ಟುವಿನಲ್ಲಿ ಜರಗಿತು.


ಸಭೆಯಲ್ಲಿ ತಾಲೂಕು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ ಕಲ್ಲಾಪು, ಉಪಾಧ್ಯಕ್ಷ ಸುoದರ ಪೂಜಾರಿ, ನಿರ್ದೇಶಕರಾದ ವಿನೋದಿನಿ ರಾಮಪ್ಪ ಪೂಜಾರಿ ಪಣೆಜಾಲು, ಅನೂಪ್ ಬoಗೇರ ಮದ್ದಡ್ಕ, ಪ್ರಮೋದ್ ಮಚ್ಚಿನ, ಕೋಟಿ ಚೆನ್ನಯ್ಯ ಕ್ರೀಡಾಕೂಟದ ಕ್ರೀಡಾ ಕಾರ್ಯದರ್ಶಿ ಸಂಘದ ನಿರ್ದೇಶಕ ತರೂಷ್ ಹೇರಾಜೆ, ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿಯ ಅಧ್ಯಕ್ಷ ನಾಗೇಶ್ ಅದೇಲು, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಲಲಿತಾ ಕೇದಳಿಕೆ ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.









