




ಧರ್ಮಸ್ಥಳ: ಸುಮಾರು 40 ಗ್ರಾಂ ತೂಕದ ಚಿನ್ನದ ಚೈನ್ ಬೊಳ್ಯ ಸ್ವಾತಿ ರೆಸಿಡೆನ್ಸಿ ಮಾಲಕ ಲ | ಪ್ರಭಾಕರ ಗೌಡ ಬೊಳ್ ರವರು ಹಿಂತಿರುಗಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರಿನ ನಿವಾಸಿ ಜೀವನ್ ಗೌಡ ರವರು ನ.19ರಂದು ಧರ್ಮಸ್ಥಳದ ಬೊಳ ಸ್ವಾತಿ ರೆಸಿಡೆನ್ಸಿಯಲ್ಲಿ ತಂಗಿದ್ದು ಚೈನ್ ನ್ನು ಅಲ್ಲೇ ಮರೆತು ಬಿಟ್ಟು ಹೋಗಿದ್ದರು. ವಸತಿಗೃಹದ ಕ್ಲೀನರ್ ರವರು ರೂಮ್ ಕ್ಲೀನ್ ಮಾಡುವ ಸಂದರ್ಭ ಚೈನ್ ದೊರೆತ್ತಿದ್ದು, ಕೂಡಲೇ ಮಾಲಕರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಚೈನ್ ಜ್ಞಾಪಿಸಿಕೊಂಡ ಮಾಲಕ ವಾಪಸ್ಸು ವಸತಿ ಗೃಹಕ್ಕೆ ಬಂದು ಚೈನ್ ನ್ನು ಪಡೆದುಕೊಂಡಿದ್ದಾರೆ. ಸ್ವಾತಿ ವಸತಿಗೃಹದ ಮಾಲಕರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.









