



ಕುವೆಟ್ಟು: ಬೆಳ್ತಂಗಡಿ ವಲಯದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮುದ್ದು ಕoದ ಫೋಟೋ ಸ್ಪರ್ಧೆ 2025ರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಸಮಾರಂಭ ನ. 18ರoದು ಗುರುವಾಯನಕೆರೆ ಛಾಯಾ ಭವನದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯದ ಅಧ್ಯಕ್ಷ ರವಿ ಪೂಜಾರಿ ನಾರಾವಿ ವಹಿಸಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ವಿಲ್ಸನ್ ಬೆಳ್ತಂಗಡಿ, ಉಪಾಧ್ಯಕ್ಷರಾದ ಉಮೇಶ್ ಕುಲಾಲ್ ಗುರುವಾಯನಕೆರೆ, ಹರ್ಷ ಬಳ್ಳಮoಜ, ಪ್ರಧಾನ ಕಾರ್ಯದರ್ಶಿ ದಾಮೋದರ್ ಗುರುವಾಯನಕೆರೆ, ಕೋಶಾಧಿಕಾರಿ ಸುಜಿತ್ ರೈ ಪದ್ಮುಂಜ, ಛಾಯಾ ಕಾರ್ಯದರ್ಶಿ ಸಂದೇಶ್ ನಿಡ್ಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ವಿಲ್ಸನ್ ಬೆಳ್ತಂಗಡಿ ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಹುಮಾನ ಪಡೆದ ಪುಟಾಣಿ ಮಕ್ಕಳ ಹೆತ್ತವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಥಮ, ದ್ವಿತೀಯ, ತ್ರತಿಯ ಹಾಗೂ ತೀರ್ಪುಗಾರರು ಮೆಚ್ಚುಗೆ ಗಳಿಸಿದ ಫೋಟೋಗಳಿಗೆ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಬಹುಮಾನದ ಪ್ರಾಯೋಜಕರಾದ ವಲಯದ ಮಾಜಿ ಅಧ್ಯಕ್ಷೆ ಸಿಲ್ವಿಯಾ ಬೆಳ್ತಂಗಡಿ ಹಾಗೂ ಸುರೇಶ್ ಬಿ. ಕೌಡoಗೆ ಅವರನ್ನು ಮತ್ತು ವಿಜೇತರಾದ ಮಕ್ಕಳ ಛಾಯಾ ಚಿತ್ರಗಾರರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗೌರವ ಸಲಹೆಗಾರರು, ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.
ಗಣೇಶ್ ಹೆಗ್ಡೆ ನಾರಾವಿ ಪ್ರಾರ್ಥನೆಗೈದರು. ಅಧ್ಯಕ್ಷ ರವಿ ಪೂಜಾರಿ ನಾರಾವಿ ಸ್ವಾಗತಿಸಿ, ಉಮೇಶ್ ಕುಮಾರ್ ಮದ್ದಡ್ಕ ಕಾರ್ಯಕ್ರಮ ನಿರೂಪಿಸಿ, ಹರ್ಷ ಬಳ್ಳಮಂಜ ಧನ್ಯವಾದ ನೀಡಿದರು. (ವರದಿ ಮನು ಮದ್ದಡ್ಕ)








