ಬೆಳ್ತಂಗಡಿ: ರೋಟರಿ ಕ್ಲಬ್ ನಿಂದ ಸ. ಪಿ.ಯು. ಕಾಲೇಜು ವಿದ್ಯಾರ್ಥಿಗಳಿಗೆ 10 ಲಕ್ಷ ವಿದ್ಯಾರ್ಥಿ ವೇತನ

0

ಬೆಳ್ತಂಗಡಿ: ರೋಟರಿ ಕ್ಲಬ್ ಹಾಗೂ ಬೆಂಗಳೂರು ರೋಟರೀ ಇಂದಿರಾ ನಗರ ಸಹಭಾಗಿತ್ವದಲ್ಲಿ ರೂ. 10,80,000/- ವಿದ್ಯಾರ್ಥಿ ವೇತನವನ್ನು, ಬೆಳ್ತಂಗಡಿ ತಾಲೂಕಿನ 270 ಅರ್ಹ ಪಿಯು ವಿದ್ಯಾರ್ಥಿಗಳಿಗೆ ತಲಾ ರೂ 4000/-ದಂತೆ ನೀಡಲಿದೆ.

ಈ 10,80,000/- ಮೊತ್ತದಲ್ಲಿ, ಬೆಂಗಳೂರು ರೋಟರೀ ಇಂದಿರಾ ನಗರದ ಕೊಡುಗೆ 8,10,000/-, ರೋಟರೀ ಕ್ಲಬ್ ಬೆಳ್ತಂಗಡಿ ಕೊಡುಗೆ 1,70,000/-, ಮತ್ತು ಕೃಷ್ಣ ಪೆಡುವೆಟ್ನಾಯ ಪ್ರತಿಷ್ಠಾನ ಕೊಡುಗೆ ರೂ. ಒಂದು ಲಕ್ಷ ಇರಲಿದೆ.

ನ. 25ರಂದು ಮಧ್ಯಾಹ್ನ 2:30ಕ್ಕೆ, ರೋಟರೀ ಭವನದಲ್ಲಿ ನಡೆಯಲಿರುವ ವಿದ್ಯಾರ್ಥಿ ವೇತನ ವಿತರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ಪ್ರೊ. ಪ್ರಕಾಶ ಪ್ರಭು ವಹಿಸಲಿರುವರು. ಉದ್ಘಾಟನೆಯನ್ನು ಬೆಂಗಳೂರು ರೋಟರೀ ಇಂದಿರಾ ನಗರದ ಮಾಜಿ ಅಧ್ಯಕ್ಷ ರೋ. ಜಗದೀಶ ಮುಗುಳಿ ಮಾಡಲಿರುವರು. ಕೃಷ್ಣ ಪೆಡ್ವೆಟ್ನಾಯ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಪೆಡ್ವೆಟ್ನಾಯ, ರೋಟರೀ ಜಿಲ್ಲೆ 3181 ಇದರ ಮುಂದಿನ ವರ್ಷದ ಜಿಲ್ಲಾಧ್ಯಕ್ಷ ರೊ. ಸತೀಶ್ ಬೋಳಾರರು ಮುಖ್ಯ ಅತಿಥಿಗಳಾಗಿಯೂ, ಉಜಿರೆ ಸಂಧ್ಯಾ ಫ್ರೆಶ್ ಮಾಲಕ ರಾಜೇಶ ಪೈ, ಅಸಿಸ್ಟೆಂಟ್ ಗವರ್ನರ್ ರೊ. ಡಾ ಎ.ಜಯಕುಮಾರ ಶೆಟ್ಟಿ, ವಲಯ ಸೇನಾನಿ ರೊ. ಸುರೇಶ ಸಾಲಿಯಾನ್, ರೋಟರೀ ಸೇವಾ ಟ್ರಸ್ಟ ಅಧ್ಯಕ್ಷ ರೋ. ಶ್ರೀಕಾಂತ ಕಾಮತ್, ಸ್ಕಾಲರ್ ಶಿಪ್ ಸಮಿತಿಯ ಚೆಯರ್ ಮ್ಯಾನ್ ರೊ. ಅಬೂಬಕ್ಕರ್ ಯು.ಎಚ್. ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ತಮ್ಮ ಪ್ರಕಟಣೆಯಲ್ಲಿ ಪ್ರೊ. ಪ್ರಕಾಶ ಪ್ರಭು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here