



ತೋಟತ್ತಾಡಿ: ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಭಜನಾ ಮಂಡಳಿಯ 25ನೇ ವರ್ಷದ ವಾರ್ಷಿಕೋತ್ಸವ ಮತ್ತು ಮಹಾಶಿವರಾತ್ರಿ ಕಾರ್ಯಕ್ರಮದ ಪೂರ್ವಸಿದ್ಧತೆಯ ಬಗ್ಗೆ ಭಕ್ತಾದಿಗಳ ಸಮಾಲೋಚನಾ ಸಭೆ ನ.16ರoದು ದೇವಸ್ಥಾನದ ವಠಾರದಲ್ಲಿ ಭಜನಾ ಮಂಡಳಿಯ ಅಧ್ಯಕ್ಷ ಕುಶಾಲಪ್ಪ ಗೌಡ ಅಗರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ನೂತನ ಬೆಳ್ಳಿಹಬ್ಬ ಆಚರಣ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸನತ್ ಕುಮಾರ್ ಮೂರ್ಜೆ, ಪ್ರಧಾನ ಕಾರ್ಯದರ್ಶಿಗಳಾಗಿ ದಿನೇಶ್ ನಾಯ್ಕ ಕೋಟೆ. ಮತ್ತು ವಿಜಯ ಗೌಡ ಅಗರಿ, ಕಾರ್ಯದರ್ಶಿಯಾಗಿ ಪ್ರವೀಣ್ ದೇವಾಡಿಗ ಗಾಣದಕೊಟ್ಟಿಗೆ, ಭವ್ಯ ಗೌಡ ಅಗರಿ, ದೀನಾವತಿ ಗೌಡ ಬೈಲಂಗಡಿ, ಉಪಾಧ್ಯಕ್ಷರಾಗಿ ಗುರುವಪ್ಪ ಭಂಡಾರಿ ಅಗರಿ, ರಾಮಣ್ಣ ಭಂಡಾರಿ ಅಗರಿ, ರಮೇಶ್ ನಾಯ್ಕ ಕೋಟೆ, ಶೇಖರ ಗೌಡ ಪರಾರಿ, ಆನಂದ ನಾಯ್ಕ ಕೋಟೆ, ಆನಂದ ಗೌಡ ಬಾರೆ, ಅರುಣ್ ಅಗರಿ, ಸುಮತಿ ಬರಮೇಲು, ಜಯಂತಿ ನೆಲ್ಲಿಗುಡ್ಡೆ, ಶಾರದ ಗೌಡ ಪಿತ್ತಿಲು, ಸಂಚಾಲಕರಾಗಿ ಅಣ್ಣಿ ಗೌಡ ಹೊಸಹೊಕ್ಲು, ಶಾಜಿಮೋಹನ್ ಮೂರ್ಜೆ, ಸಹ ಸಂಚಾಲಕರಾಗಿ ಬಾಲಕೃಷ್ಣ ಗೌಡ ಪಾದೆ, ಶಶಿಧರ ಗೌಡ ಪಿತ್ತಲು, ಕೋಶಾಧಿಕಾರಿಯಾಗಿ ದಿವಾಕರ ಪೂಜಾರಿ ಕಲೆಂಜೊಟ್ಟು, ಗೌರವ ಸಲಹೆಗಾರರಾಗಿ ರಮೇಶ್ ಗೌಡ ಹಳೆ ಕಕ್ಕಿಂಜೆ ಅವರನ್ನು ಆಯ್ಕೆ ಮಾಡಲಾಯಿತು.









