



ಬೆಳ್ತಂಗಡಿ: ಸ. ಪ್ರ. ದ. ಕಾಲೇಜಿನ ರಾ. ಸೇ. ಯೋಜನೆ ಘಟಕ I ಮತ್ತು II ರ ವಾರ್ಷಿಕ ವಿಶೇಷ ಶಿಬಿರ 2025-26 ನ.14ರಂದು ಕುಕ್ಕೇಡಿ (ಬುಳೆಕ್ಕಾರ) ದ .ಕ ಜಿ. ಪಂ. ಹಿ. ಪ್ರಾ. ಶಾಲೆಯಲ್ಲಿ ಸಮಾಪ್ತಿಗೊಂಡಿತು. ‘ಡಿಜಿಟಲ್ ಸಾಕ್ಷರತೆಗೆ ಯುವಜನತೆ’ ‘ನನ್ನ ಭಾರತಕ್ಕಾಗಿ ಯುವ ಜನತೆ’ ಎಂಬ ಧ್ಯೇಯ ವಾಕ್ಯದಡಿ ಏಳು ದಿನಗಳ ಕಾಲ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸಮಾರೋಪ ಭಾಷಣಕಾರರಾಗಿ ಮಾತಾಡಿದ ಸಿದ್ದಕಟ್ಟೆ ಸ. ಪ. ದ. ಕಾಲೇಜು ವಾಣಿಜ್ಯ ಶಾಸ್ತ್ರ/ ರಾ. ಸೇ. ಯೋಜನಾಧಿಕಾರಿ, ವಿಭಾಗ ಮುಖ್ಯಸ್ಥೆ ಡಾ. ಸುಮನ ಶೆಟ್ಟಿ ಎನ್. ಅವರು ಶಿಬಿರಾರ್ಥಿಗಳು ತಮ್ಮ ಹೆಸರನ್ನು ಮತದಾರ ಪಟ್ಟಿಯಲ್ಲಿ ನೋಂದಣಿ ಮಾಡುವ ಅಗತ್ಯತೆಯನ್ನು ಒತ್ತಿ ಹೇಳಿದರು.
ಶಿಬಿರದಲ್ಲಿ ಪಡೆದ ಅನುಭವವು ಭವಿಷ್ಯದಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತುಕೊಳ್ಳಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಅವರು ಶಿಬಿರಾರ್ಥಿಗಳ ಶಿಸ್ತು, ಉತ್ಸವ ಹಾಗೂ ಕಾರ್ಯಕ್ಷಮತೆಯನ್ನು ಕೊಂಡಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್ ವಿ. ಅವರು ಶಿಬಿರದ ಯಶಸ್ವಿಗೆ ಕಾರಣರಾದ ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ವಾಣಿಜ್ಯ ಶಾಸ್ತ್ರ / ಸದಸ್ಯರು ರಾ. ಸೇ. ಯೋಜನಾ ಸಮಿತಿ ವಿಭಾಗ ಮುಖ್ಯಸ್ಥ ಪ್ರೊ. ಪದ್ಮನಾಭ ಕೆ.,

ಬೆಳ್ತಂಗಡಿ ಸ. ಪ್ರ. ದ. ಕಾಲೇಜಿನ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೃಷ್ಣಪ್ಪ ಉಜ್ಜಾಲ್, ಕುಕ್ಕೇಡಿ ಗ್ರಾಮ ಪಂಚಾಯತ್ ಸದಸ್ಯ ಗೋಪಾಲ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ವೈಲೆಟ್ ಮೋರಾಸ್, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ವೇದಾವತಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಧಾಕೃಷ್ಣ ಎಚ್.ಬಿ., ನಿರ್ವಹಣಾ ಶಾಸ್ತ್ರ ವಿಭಾಗ ಮುಖ್ಯಸ್ಥೆ ಪ್ರೊ. ರಶ್ಮಿ ಎಚ್. ಶಿಬಿರಾರ್ಥಿಗಳ ಶ್ರಮವನ್ನು ಶ್ಲಾಘಿಸಿದರು.
ಘಟಕ – I ರಾ.ಸೇ. ಯೋಜನಾಧಿಕಾರಿ ಪ್ರೊ. ರೊನಾಲ್ಡ್ ಪ್ರವೀಣ್ ಕೊರೆಯ ವರದಿ ವಾಚಿಸಿದರು. ಘಟಕ- II ರಾ.ಸೇ. ಯೋಜನಾಧಿಕಾರಿ ಪ್ರೊ. ಕವಿತ, NSS ನಾಯಕ/ ನಾಯಕಿಯರಾದ ಮನೀಶ್ ದ್ವಿತೀಯ ಬಿ.ಕಾಂ, ಕೃತೀಕ್ ದ್ವಿತೀಯ ಬಿ.ಎ., ನೀಶಾ ದ್ವಿತೀಯ ಬಿ.ಕಾಂ., ತೇಜಾಕ್ಷಿ ದ್ವಿತೀಯ ಬಿ.ಬಿ.ಎ., ಬುಳೆಕ್ಕಾರ ಶಾರಾದಾಂಭ ಭಜನಾ ಮಂಡಳಿ ಅಧ್ಯಕ್ಷ ಚಂದ್ರಹಾಸ ಮಂಜಲೊಕ್ಕು, SDMC ಸದಸ್ಯ ವಿಠಲ ದೇವಾಡಿಗ, ಸಹ ಶಿಕ್ಷಕಿ ಭಾಗ್ಯ ಜಿ. ಎಂ., ಅತಿಥಿ ಶಿಕ್ಷಕಿ ಆಶಾಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ಪ್ರಗತಿ, ಸುದೀಪ್ ಹಾಗೂ ಅನ್ವಿತಾ ತಮ್ಮ ಏಳು ದಿನಗಳ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪುನೀತ್ ಮತ್ತು ಬಳಗ ಪ್ರಾರ್ಥಿಸಿದರು. ಈ ಸಮಾರೋಪ ಕಾರ್ಯಕ್ರದಲ್ಲಿ ಊರವರು ಹಾಗೂ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು, ಬೋಧಕ/ ಬೋಧಕೇತರ ವೃಂದದವರು ಭಾಗವಹಿಸಿದರು. ಕಾಲೇಜಿನ ಶಿಬಿರಕ್ಕೆ ಊರವರು ನೀಡಿದ ಸಹಕಾರವನ್ನು ಸ್ಮರಿಸಲಾಯಿತು. ಪೂರ್ಣಿಮ ದ್ವಿತೀಯ ಬಿ.ಎ ಸ್ವಾಗತಿಸಿದರು. ನಿರೀಕ್ಷಾ ದ್ವಿತೀಯ ಬಿ.ಕಾಂ . ಕಾರ್ಯಕ್ರಮವನ್ನು ನಿರೂಪಿಸಿದರು. ಅನನ್ಯ ಪ್ರಥಮ ಬಿ.ಕಾಂ ವಂದಿಸಿದರು.









