ಉಜಿರೆ: ಎಸ್‌.ಡಿ.ಎಂ ಪಾಲಿಟೆಕ್ನಿಕ್ ನಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ನಿಂದ ಪೂಲ್ ಕ್ಯಾಂಪಸ್ ಡ್ರೈವ್

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್, ಉಜಿರೆಯ ಪ್ಲೇಸ್‌ಮೆಂಟ್ ಸೆಲ್ ವತಿಯಿಂದ ಪೂಲ್ ಕ್ಯಾಂಪಸ್ ಡ್ರೈವ್ ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮವು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವಾಹನೋದ್ಯಮ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಅನ್ವೇಷಿಸಲು ಉತ್ತಮ ವೇದಿಕೆಯಾಗಿತು.

ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ (ಟಿಕೆಎಂ), ಬೆಂಗಳೂರು, ದೇಶದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿ, ನೇಮಕಾತಿ ಪ್ರಕ್ರಿಯೆಗಾಗಿ ಕಾಲೇಜಿಗೆ ಭೇಟಿ ನೀಡಿತು. ಕಾರ್ಯಕ್ರಮವು ಪ್ಲೇಸ್‌ಮೆಂಟ್ ಅಧಿಕಾರಿ ಶ್ರೀ ಅಮರೇಶ ಹೆಬ್ಬಾರ್ ಅವರ ಹಾರ್ದಿಕ ಸ್ವಾಗತದ ಮಾತುಗಳಿಂದ ಆರಂಭವಾಯಿತು.

ವೇದಿಕೆಯಲ್ಲಿ ಟಿಕೆಎಂ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಗಳು ಹಾಗೂ ಎಸ್.ಡಿ.ಎಂ ಪಾಲಿಟೆಕ್ನಿಕ್ನ ಪ್ರಾಂಶುಪಾಲ ಸಂತೋಷ ಉಪಸ್ಥಿತರಿದ್ದರು. ಪ್ರಾoಶುಪಾಲರು ತಮ್ಮ ಅಮೂಲ್ಯ ಮಾತುಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು ಹಾಗೂ ಯಶಸ್ಸಿನ ಹಾರೈಕೆ ಸಲ್ಲಿಸಿದರು. ಎಚ್‌.ಆರ್‌. ತಂಡವು ಸಂಸ್ಥೆಯ ಚಟುವಟಿಕೆಗಳು, ಉದ್ಯೋಗಾವಕಾಶಗಳು ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ದೊರೆಯುವ ವೃತ್ತಿ ಬೆಳವಣಿಗೆಯ ಕುರಿತು ಮಾಹಿತಿ ನೀಡಿದರು.

ವಿವಿಧ ಪಾಲಿಟೆಕ್ನಿಕ್ ಕಾಲೇಜುಗಳಿಂದ ಬಂದ ಒಟ್ಟು 98 ವಿದ್ಯಾರ್ಥಿಗಳು ಉತ್ಸಾಹಭರಿತವಾಗಿ ಕ್ಯಾಂಪಸ್ ಡ್ರೈವ್‌ನಲ್ಲಿ ಭಾಗವಹಿಸಿದರು ಮತ್ತು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು.

ಕಾರ್ಯಕ್ರಮವನ್ನು ಪ್ಲೇಸ್‌ಮೆಂಟ್ ಸಮಿತಿಯ ಸದಸ್ಯರಾದ ವರದರಾಜ ಬಾಲ್ಲಾಳ್, ಶಿವರಾಜ್ ಪಿ., ಅಶ್ವಿನ್ ಮರಾಟೆ, ಶಾದ್ವಲ ಸೆಬಾಸ್ಟಿಯನ್, ಅಶೋಕ್ ಮತ್ತು ವಿದ್ಯಾ ಲಕ್ಷ್ಮಿ ಅವರ ಸಂಯೋಜನೆಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಈ ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ಖ್ಯಾತ ಕೈಗಾರಿಕಾ ಸಂಸ್ಥೆಗಳೊಂದಿಗೆ ಸಂಪರ್ಕಿಸಲು ಎಸ್‌.ಡಿ.ಎಂ ಪಾಲಿಟೆಕ್ನಿಕ್ ಕೈಗೊಂಡ ಮತ್ತೊಂದು ಯಶಸ್ವಿ ಪ್ರಯತ್ನವಾಯಿತು.

LEAVE A REPLY

Please enter your comment!
Please enter your name here