ಬೆಳ್ತಂಗಡಿ : ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿಜೀ ಮಹಾರಾಜರವರಿಗೆ ಬೆಹರೀನ್ ಬಿಲ್ಲವಾಸ್ ಮತ್ತು ಬೆಹರೀನ್ ಕನ್ನಡ ಸಂಘದ ವತಿಯಿಂದ ಬೆಹರೀನ್ ಕನ್ನಡ ಸಂಘದ ಸಭಾಂಗಣದಲ್ಲಿ ಸಾವಿರಾರು ಜನರ ಸಮ್ಮಖದಲ್ಲಿ ಬಹಳ ವಿಜೃಂಭಣೆಯಿಂದ ಸರ್ವ ಸಮಾಜದ ಸಹ ಭಾಗಿತ್ವದಲ್ಲಿ ಅ. 17ರಂದು ಗುರು ವಂದನೆ’ ನಡೆಯಿತು.

ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಫಾಧರ್ ಸಾಜಿ ತೋಮಸ್ ರೆಕ್ಸರ್ ದ ಕಥೇಡ್ರಾಲ್ ಆಫ್ ಅವರ್ ಲೇಡಿ ಆಫ್ ಅರೇಬಿಯಾ, ಕಿಂಗ್ ಡಂ ಆಫ್ ಬೆಹರೀನ್ ಯುನೇಕೊ ಗ್ರೂಪ್ ಆಫ್ ಕಂಪನೀಸ್ ಸಿಇಓ ಜಯ ಶಂಕರ್ ವಿಶ್ವನಾಥಾನ್, ದ.ಕನ್ನಡ. ಮುಸ್ಲಿಮ್ ವಲ್ಫಾರ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ರಜಾಕ್, ಕನ್ನಡ ಸಂಘ ಶಾರ್ಜ (SHARJAH) ಅಧ್ಯಕ್ಷ ಸತೀಶ್ ಪೂಜಾರಿ, ಬಲ್ಲವರ ಮಹಾ ಮಂಡಲ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಬೆಹರನ್ ಕನ್ನಡ ಸಂಘದ ಅಧ್ಯಕ್ಷ ಅಜೀತ್ ಬಂಗೇರ, ಮಾಜಿ ಅಧ್ಯಕ್ಷ ಅಮರನಾಥ್ ರೈ, ಬಿಲ್ಲವರ ಫ್ಯಾಮಿಲಿ, ದುಬೈ ಅಧ್ಯಕ್ಷ ದೀಪಕ್ ಎಸ್. ಪಿ., ಶ್ರೀ ಸೌದಿ ಅರೇಬಿಯಾ ಬಿಲ್ಲವರ ಅಸೋಸಿಯೇಶನ್ಅಧ್ಯಕ್ಷ ಭಾಸ್ಕರ ಕೋಟ್ಯಾನ್, ಕತಾರ್ ಬಿಲ್ಲವಾಸ್ ಅಧ್ಯಕ್ಷೆ ಅಪರ್ಣಾ ಸುವರ್ಣ, ದಮಾಮ್ ಬಿಲ್ಲವಾಸ್ ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್, ಕುವೈಟ್ ಬಿಲ್ಲವಾಸ್ ಅಧ್ಯಕ್ಷ ಅಮರ್ ನಾಥ್ ಸುವರ್ಣ, ಓಮನ್ ಬಿಲ್ಲವಾಸ್ ಸ್ಥಾಪಕ ಅಧ್ಯಕ್ಷ ಉಮೇಶ್ ಬಂಟ್ವಾಳ, ರಾಜಕುಮಾರ್, ಬೆಹರನ್ ಬಿಲ್ಲವಾಸ್ ಮಾಜಿ ಅಧ್ಯಕ್ಷ ರಾಜಕುಮಾರ್, ಓಮನ್ ಬಿಲ್ಲವಾಸ್ ಮಾಜಿ ಅಧ್ಯಕ್ಷ ಸುಜೀತ್ ಅಂಚನ್, ಬೆಹರನ್ ಬಂಟ್ಸ್ ಸಂಘದ ಅಧ್ಯಕ್ಷ .ಡಾ.ಮಿಥುನ್ ಭಂಡಾರಿ, ಬೆಹರನ್ ನಾರಾಯಣ ಕಲ್ಪರ್ ಸೊಸೈಟಿ ಅಧ್ಯಕ್ಷ ಕೃಷ್ಣ ಕುಮಾರ್, ಬೆಹರ ನ್ ಮೊಗವೀರ ಸಂಘದ ಅಧ್ಯಕ್ಷೆ ಶಿಲ್ಪಾ ಶಾಮಿತ್ ಕುಂದರ್, ಬೆಹರೀನ್ ಕುಲಾಲ್ ಸಂಘದ ಅಧ್ಯಕ್ಷ, ಗಣೇಶ್ ಮಾನಿಲ, ಬೆಹರೀನ್ ವಿಶ್ವ ಕರ್ಮ ಸೇವಾ ಬಳಗದ ಅಧ್ಯಕ್ಷ ಸತೀಶ್ ಆಚಾರ್ಯ, ಬೆಹರೀನ್ ಬಸವ ಸಮಿತಿ ಅಧ್ಯಕ್ಷೆ ಹೇಮಾ. ಎಸ್. ಪಾಟೇಲ್, ಬೆಹರೀನ್ ಬಿಲ್ಲವಾಸ್ ಅಧ್ಯಕ್ಷರು ಕಾರ್ಯಕ್ರಮದ ರೂವಾರಿ ಪ್ರಕಾಶ್ ಅಂಚನ್, ಬೆಹರೀನ್ ಬಿಲ್ಲವಾಸ್ ಕೊಲ್ಲಿ ರಾಷ್ಟ್ರದ ಎಲ್ಲಾ ಸಂಘಟನೆಗಳ ಅಧ್ಯಕ್ಷರುಗಳು ಎಲ್ಲಾ ಸಮಾಜದ ಮುಖ್ಯಸ್ಥರು ಒಂದೇ ವೇದಿಕೆಯಲ್ಲಿ ಸೇರುವ ಹಾಗೆ ಮಾಡಿದ ಬೆಹರನ್ ಬಿಲ್ಲವಾಸ್ ಮಾಜಿ ಅಧ್ಯಕ್ಷ ಹರೀಶ್ ಪೂಜಾರಿ, ಇನ್ನಿತರ ಪ್ರಮುಖರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿಭಿನ್ನ ತಂಡಗಳಿಂದ ಭಜನೆ, ಕುಣಿತ ಭಜನೆ, ಸತ್ಯನಾರಾಯಣ ಪೂಜೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಪೂಜೆ, ಶ್ರೀಗಳಿಂದ ಆಶೀರ್ವಚನ, ಮಂತ್ರಾಕ್ಷತೆ ವಿತರಣೆ, ಅನ್ನಪ್ರಸಾದ ವಿತರಣೆ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಗುರುದೇವ ಮಠದಿಂದ ಟ್ರಷ್ಟಿ ತುಕಾರಾಮ ಸಾಲ್ಯಾನ್, ಕೃಷ್ಣಪ್ಪ ಗುಡಿಗಾರ್, ರವೀಂದ್ರ ಪೂಜಾರಿ ಆರ್ಲ, ರಾಘವೇಂದ್ರ, ವಿ. ನಾಯ್ಕ ಭಾಗವಹಿಸಿದ್ದರು.