ಬೆಳ್ತಂಗಡಿ: ಭಾರತೀಯ ಜೀವ ವಿಮಾ ನಿಗಮ ಉಪಗ್ರಹ ಶಾಖೆ ಉದ್ಘಾಟನೆಗೊಂಡು 18 ವರ್ಷ ತುಂಬಿದ ಅಂಗವಾಗಿ 18 ನೇ ವಾರ್ಷಿಕೋತ್ಸವ ಕಾರ್ಯಕ್ರಮ ಅ. 13ರಂದು ನಡೆಯಿತು. ಉಪಗ್ರಹ ಶಾಖಾಧಿಕಾರಿ ಪ್ರಕಾಶ್ ಕೆ., ಅಭಿವೃದ್ಧಿ ಅಧಿಕಾರಿಗಳಾದ ಎಂ.ವಿ. ಶೆಟ್ಟಿ, ರಾಘವೇಂದ್ರ ಟಿ. ಡಿ., ಉದಯ ಶಂಕರ್, ವಿನಯ ಕುಮಾರ್, ಸಂದೀಪ್ ಅರಮನೆ, ಆಡಳಿತಾಧಿಕಾರಿಗಳಾದ ಹರಿಶ್ಚಂದ್ರ ಹೆಗ್ಡೆ, ಕೇಶವ ಎಂ., ವಿಮಾ ಮುಖ್ಯ ಸಲಹೆಗಾರರು,ಸಲಹೆ ಗರಾರು ಪ್ರತಿನಿಧಿಗಳು, ಉಪಸ್ಥಿತರಿದ್ದು ದೀಪ ಬೆಳಗಿಸಿದರು.

ಹೆಚ್ಚಿನ ಹೊಸ ವ್ಯವಹಾರ ಮಾಡಿದ ಪ್ರತಿನಿಧಿಗಳಾದ ಪುಷ್ಪರಾಜ ಹೆಗ್ಡೆ, ಶ್ರೀಕಾಂತ ಕಾಮತ್,ರುಡಾಲ್ಫ್ ಲೋಬೊ, ಕರುಣಾಕರ ನಾಯಕ್, ಲೋಕೇಶ್ ಶೆಟ್ಟಿ ಇವರನ್ನು ಗೌರವಿಸಲಾಯಿತು. ಶಾಖಾಧಿಕಾರಿ ಪ್ರಕಾಶ್ ಕೆ., ಅಭಿವೃದ್ಧಿ ಅಧಿಕಾರಿ ಎಂ. ವಿ. ಶೆಟ್ಟಿ, ಪ್ರತಿನಿಧಿ ಲೋಕೇಶ್ ಶೆಟ್ಟಿ ಶಾಖೆಯ ಸಾಧನೆ ಬಗ್ಗೆ ಮಾತನಾಡಿದರು. ಪ್ರತಿನಿಧಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು. ಅಭಿವೃದ್ಧಿ ಅಧಿಕಾರಿ ಟಿ.ಡಿ. ರಾಘವೇಂದ್ರ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.