ಉಜಿರೆ: ‘ಧೀಮ್’ ಕುಟುಂಬದಲ್ಲಿ ಪರಿಚಯದ ಸಂಭ್ರಮ

0

ಉಜಿರೆ: ಬೇರೆಯವರ ಬಗೆಗೆ ಚಿಂತನೆ ನಡೆಸುವುದರ ಬದಲು, ನಮ್ಮದೇ ಜೀವನದ ಬಗೆಗೆ ಆತ್ಮಲೋಕನವನ್ನು ಮಾಡಿಕೊಳ್ಳುವುದು, ಬದುಕಿಗೆ ಬಹು ಮುಖ್ಯ ಎಂದು ಎಸ್. ಡಿ. ಎಂ. ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರನ್ ವರ್ಮಾ ಅಭಿಪ್ರಾಯಪಟ್ಟರು.

ಉಜಿರೆಯ ಎಸ್.ಡಿ.ಎಂ ಕಾಲೇಜಿನ, ವಿದ್ಯಾರ್ಥಿ ನಿಲಯಗಳಾದ “ಧೀಮಂತ್ ಹಾಗೂ ಧೀಮಹಿ”ಯ ಸಹಭಾಗಿತ್ವದಲ್ಲಿ, ಅ. 11ರಂದು “ಪರಿಚಯ 2025” ಕಾರ್ಯಕ್ರಮವನ್ನು ಪ್ರಕೃತಿ ಚಿಕಿತ್ಸಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿ, ಸ್ನೇಹಿತರು ಮಾಡುವ ಸಣ್ಣ ಸಣ್ಣ ತಪ್ಪುಗಳನ್ನು ಬದುಗಿಟ್ಟು, ಕಾಲೇಜಿನ ಜೀವನದಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಭಾಗಿಯಾಗುವುದರ ಜೊತೆ ಜೊತೆಗೆ ಹಾಸ್ಟೆಲ್ ನಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು, ಪ್ರತಿಯೊಂದು ವ್ಯಕ್ತಿಯ ಬದುಕಿನಲ್ಲೂ ಸಹ ನಾಯಕತ್ವದ ಗುಣಗಳು ಬೆಳೆಯುತ್ತವೆ ಮತ್ತು ವಿದ್ಯಾರ್ಥಿಗಳು ತಾವು ಶಿಕ್ಷಣ ಪಡೆಯುವ ಸಂಸ್ಥೆಯ ಬಗೆಗೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳ ಬಗೆಗೆ ಸಹ ತಿಳಿದುಕೊಳ್ಳುವುದು ಅಗತ್ಯ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ, ವಿಶ್ವನಾಥ ಪಿ. ಮಾತನಾಡಿ, ಜೀವನದಲ್ಲಿ ನಾವು ಸದಾ ಧನಾತ್ಮಕವಾಗಿ ಯೋಚನೆ ಮಾಡಬೇಕೇ ಹೊರೆತು, ಅದನ್ನು ಖುಣಾತ್ಮಕವಾಗಿ ಬದಲಾಯಿಸಬಾರದೆಂದು ತಿಳಿಸಿದರು. ವಿದ್ಯಾರ್ಥಿಗಳು ಜೀವನದಲ್ಲಿ ಸದಾ ಸಣ್ಣ ಸಣ್ಣ ಗುರಿಗಳನ್ನು ಹೊಂದಬೇಕು ಮತ್ತು ಅದನ್ನು ನನನಾಗಿಸುವ ಬಗೆಗೆ ಹೆಚ್ಚು ಗಮನಿಸವಹಿಸಿದರೆ, ಜೀವನ ಸಂತೋಷದ ಹಾದಿಯನ್ನು ಕಂಡುಕೊಳ್ಳುತ್ತದೆ ಎಂದರು.

ಕಾರ್ಯಕ್ರಮದಲ್ಲಿ , ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ., ಮುಖ್ಯ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಯುವರಾಜ್ ಪೂವಾನಿ ಹಾಗೂ ಮತ್ತಿರರು ಉಪಸ್ಥಿತರಿದ್ದರು.

ತೇಜಸ್ವಿನಿ ದೇವಾಡಿಗ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪಲ್ಲವಿ ಪಟಾಲ್ ನಿರೂಪಿಸಿದರು. ಮತ್ತು ಲತಿಕಾ ವಂದಿಸಿದರು.

LEAVE A REPLY

Please enter your comment!
Please enter your name here