ಬೆಳ್ತಂಗಡಿ: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೆ ಷೂ ಎಸೆದ ಪ್ರಕರಣದಲ್ಲಿ ಕೂಡಲೇ ಸಮರ್ಪಕವಾದ ತನಿಖೆ ನಡೆಸಿ ಆರೋಪಿಯ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಒತ್ತಾಯಿಸಿದ್ದಾರೆ.
ಈ ಘಟನೆಯಿಂದಾಗಿ ಭಾರತದ ಸಂವಿಧಾನಕ್ಕೆ ಅವಮಾನವಾಗಿದೆ. ನ್ಯಾಯಾಂಗ ವ್ಯವಸ್ತೆಯನ್ನು ಅವಮಾನಿಸಲಾಗಿದೆ. ಎಸೆದ ವ್ಯಕ್ತಿಯ ಹಿಂದಿರುವ ಶಕ್ತಿಗಳನ್ನು ತನಿಖೆ ನಡೆಸಿ ಹೊರತರುವ ಕಾರ್ಯವನ್ನು ಮಾಡಬೇಕಾಗಿದೆ. ಇಂತಹ ಘಟನೆಗಳಿಂದಾಗಿ ನಾವು ತಲೆತಗ್ಗಿಸಬೇಕಾದ ಸ್ಥಿತಿ ಎದುರಾಗಿದೆ ಸರಕಾರ ಕೂಡಲೇ ಈ ಬಗ್ಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.