ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅ. 24 ಹಾಗೂ 25 ರಂದು ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆವರೆಗೆ ಮೂಳೆ ವಿಭಾಗದ ತಜ್ಞ ವೈದ್ಯರಿಂದ ಉಚಿತ ಮೂಳೆ ಮತ್ತು ಮೂಳೆ ಸಾಂದ್ರತೆ ತಪಾಸಣಾ ಶಿಬಿರ ನೆಯಲಿದೆ.

ಶಿಬಿರದಲ್ಲಿ ಸಂಧಿವಾತ ಆರೈಕೆ, ಮೊಣಕಾಲಿನ ಆಥೋಸ್ಕೋಫಿಕ್ ಲಿಗಮೆಂಟ್‌ಗಳ ತಪಾಸಣೆ, ಬೆನ್ನುಮೂಳೆ ಮತ್ತು ಕುತ್ತಿಗೆ ನೋವಿನ ತಪಾಸಣೆ, ಭುಜದ ನೋವಿನ ತಪಾಸಣೆ, ಶಸ್ತ್ರಚಿಕಿತ್ಸೆ ರಹಿತ ಮೂಳೆಯ ಆರೈಕೆ, ಮೊಣಗಂಟು ಮತ್ತು ಸೊಂಟ ನೋವಿನ ತಪಾಸಣೆ, ಪಾದ ಮತ್ತು ಮೊಣಕಾಲಿನ ತಪಾಸಣೆ, ಸ್ಪೋರ್ಟ್ಸ್ ಇಂಜುರಿ ತಪಾಸಣೆ ಸೇರಿದಂತೆ ಎಲ್ಲಾ ರೀತಿಯ ಮೂಳೆ ತಪಾಸಣೆ ಮಾಡಲಾಗುತ್ತದೆ. ಈ ಶಿಬಿರದಿಂದ ಉಚಿತ ವೈದ್ಯರ ಸಮಾಲೋಚನೆ, ಉಚಿತ ಮೂಳೆ ಸಾಂದ್ರತೆ ಪರೀಕ್ಷೆ, ಉಚಿತ ಎಕ್ಸ್‌ರೇ (ಸ್ಟೀನಿಂಗ್), ಒಳರೋಗಿ ವಿಭಾಗದಲ್ಲಿ ಸರ್ಜರಿ ಮೇಲೆ 10% ರಿಯಾಯಿತಿ, ಹೊರರೋಗಿ ವಿಭಾಗದಲ್ಲಿ ರಕ್ತ ಪರೀಕ್ಷೆ ಮತ್ತು ರೆಡಿಯೋಲಾಜಿ ಪರೀಕ್ಷೆಯಲ್ಲಿ 20% ರಿಯಾಯಿತಿ, 10% ರಿಯಾಯಿತಿ ದರದಲ್ಲಿ ಔಷಧದ ಪ್ರಯೋಜನಗಳನ್ನು ಪಡೆಯಬಹುದು.
ಇನ್ನು ಆಸ್ಪತ್ರೆಯಲ್ಲಿ ಕೀ ಹೋಲ್ ಸರ್ಜರಿ, ಪಾದದ ಸರ್ಜರಿ, ಎಂಡೋಸ್ಕೋಪಿ, ಸರ್ಜರಿ, ಲೇಸರ್ ಸರ್ಜರಿ, ಎಲ್ಲಾ ತರಹದ ಓರ್ಥೋಸ್ಕೋಪಿಕ್ ಲಿಗಮೆಂಟ್ ಸರ್ಜರಿ, ಸ೦ಪೂರ್ಣ ಮ೦ಡಿ ಮತ್ತು ಸೊ೦ಟ ಬದಲಾವಣೆ ಮತ್ತು ಡಿಸ್ಕ್ ಸರ್ಜರಿಗಳಿಗೆ ಸಂಬಂಧ ಪಟ್ಟಂತೆ ವಿಶೇಷ ರಿಯಾಯಿತಿ ಇರಲಿದೆ. ಅದೇ ರೀತಿ ಸ೦ಪೂರ್ಣ ಸುರಕ್ಷಾ ವಿಮೆ ಹೊಂದಿರುವವರು ಸುರಕ್ಷಾ ವಿಮಾ ಕಾರ್ಡ್ ಹಾಗೂ ಅಧಾರ್ ಪ್ರತಿಗಳನ್ನು ತರತಕ್ಕದ್ದು ಎಂದು ಆಡಳಿತ ಮಂಡಳಿ ತಿಳಿಸಿದೆ.
ಶಿಬಿರಕ್ಕಾಗಿ ಹೆಸರು ನೋಂದಾಯಿಸಲು 7760397878, 8073349216 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.