ಅ.12: ಎಸ್.ಕೆ ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ವಜ್ರಮಹೋತ್ಸವ ಆಚರಣೆಯ ಪ್ರಯಕ್ತ ಗ್ರಾಹಕರ ಸಮಾವೇಶ ಮತ್ತು ವೈದ್ಯಕೀಯ ತಪಾಸಣಾ ಶಿಬಿರ

0

ಬೆಳ್ತಂಗಡಿ: ಮಂಗಳೂರು ಎಸ್.ಕೆ ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ಮಂಗಳೂರು ಕುಂಟಿಕಾನ ಎ.ಜೆ. ಆಸ್ಪತ್ರೆ ರಿಸರ್ಚ್ ಸೆಂಟರ್, ಅವಿಭಜಿತ ದ.ಕ ವಿಶ್ವಕರ್ಮ ವೈದ್ಯರ ಸಂಘದ ಸಹಯೋಗದೊಂದಿಗೆ ಹಾಗೂ ಬೆಳ್ತಂಗಡಿ ಶ್ರೀ ವಿಶ್ವಕರ್ಮಾಭ್ಯುದಯ ಸಭಾ, ಆನೆಗುಂದಿ ಗುರು ಸೇವಾ ಪರಿಷತ್, ಬೆಳ್ತಂಗಡಿ ಮಂಡಲ, ಬೆಳ್ತಂಗಡಿ ವಿಶ್ವಕರ್ಮ ಸಮಾಜದ ಕಮ್ಮಾರರ ಗುಡಿ ಕೈಗಾರಿಗ ಸಂಘ, ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘ ಸಹಕಾರದೊಂದಿಗೆ ಸಂಸ್ಥೆಯ ವಜ್ರಮಹೋತ್ಸವ ಆಚರಣೆಯ ಪ್ರಯಕ್ತ”ಗ್ರಾಹಕರ ಸಮಾವೇಶ ಮತ್ತು ವೈದ್ಯಕೀಯ ತಪಾಸಣಾ ಶಿಬಿರ” ಅ.12ರಂದು ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ಜರಗಲಿರುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಎಸ್.ಕೆ.ಜಿ.ಐ. ಕೋ-ಆಪರೇಟಿವ್‌ ಸೊಸೈಲಿ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮುರಳಿ ಬಲಿಪ ವಕೀಲರು ಮತ್ತು ನೋಟರಿ ಪಬ್ಲಿಕ್ ಅಧ್ಯಕ್ಷರು, ಲಯನ್ಸ್ ಕ್ಲಬ್ ಬೆಳ್ತಂಗಡಿ, ವಿ. ಪ್ರಕಾಶ್ ಪುರೋಹಿತ್‌ ವೇಣೂರು ಅಧ್ಯಕ್ಷರು, ಆನೆಗುಂದಿ ಗುರುಸೇವಾ ಪರಿಷತ್, ಬೆಳ್ತಂಗಡಿ ಮಂಡಲ, ಹರಿಶ್ಚಂದ್ರ ಆಚಾರ್ಯ, ಪಿಲಿಚಾಮುಂಡಿಕಲ್ಲು ಶ್ರೀ ಗಣೇಶ್ ಗೋಲ್ಡ್ ಬೆಳ್ತಂಗಡಿ, ಆಶಾ ಸತೀಶ್ ಆಚಾರ್ಯ, ಹಂಸ ವುಡ್ ವರ್ಕ್ಸ್ ಬೆಳ್ತಂಗಡಿ, ಸದಾಶಿವ ಆಚಾರ್ಯ ಡಿ., ಹಿರಿಯ ಸದಸ್ಯರು ಶಕ್ತಿನಗರ, ಗುರುವಾಯನಕೆರೆ ಭಾಗವಹಿಸುವರು.

LEAVE A REPLY

Please enter your comment!
Please enter your name here