ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ(ಬಿ.ಎಡ್)ದಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ವಾಲ್ಮೀಕಿ ಜಯಂತಿಯ ಕುರಿತು ದ್ವಿತೀಯ ಬಿ.ಎಡ್. ಪ್ರಶಿಕ್ಷಣಾರ್ಥಿ ಅಕ್ಷಿತಾ ಅವರು ಮಾತನಾಡಿ “ ಶ್ರೀ ರಾಮಾಯಣ ಗ್ರಂಥದ ಕರ್ತ ಆದಂತಹ ಆದಿಕವಿ ವಾಲ್ಮೀಕಿಯನ್ನು ಉದ್ದೇಶಿಸಿ ಮಹಾನ್ ಮಹರ್ಷಿಯಾಗಿ ಜಗತ್ತಿನ ಶ್ರೇಷ್ಠ ಗ್ರಂಥ ರಾಮಾಯಣವನ್ನು ಬರೆದವರು ರತ್ನಾಕರ ಎಂದು ವರ್ಣಿಸಿದರು. ಒಬ್ಬ ಸಾಮಾನ್ಯ ಬೇಡನಾಗಿದ್ದಂತಹ ರತ್ನಾಕರನು ಮುಂದೆ ಮಹರ್ಷಿ ವಾಲ್ಮೀಕಿಯಾಗಿ ಬದಲಾವಣೆ ಹೊಂದಿರುವ ಶ್ರೇಷ್ಠ ವ್ಯಕ್ತಿ. ಶ್ರೀ ರಾಮನನ್ನು ಆರಾಧ್ಯ ದೈವನನ್ನಾಗಿ ಮಾಡಿಕೊಂಡು ರಾಮನ ಗುಣಗಾನವನ್ನು ಶ್ರೀ ರಾಮಾಯಣ ಗ್ರಂಥದ ಮೂಲಕ ತಿಳಿಸಿಕೊಟ್ಟವರು. ಇದು ಮಾನವ ಕುಲಕ್ಕೆ ಇವರು ನೀಡಿರುವ ಕೊಡುಗೆಯಾಗಿದೆ. ವಾಲ್ಮೀಕಿಯವರ ಆದರ್ಶ, ಮೌಲ್ಯ, ಜೀವನದಲ್ಲಿ ಪಾಲಿಸಿದ ತಾಳ್ಮೆ, ಜ್ಞಾನ, ತಪಸ್ಸು, ದೈವಿಕ ಪ್ರೇರಣೆಯನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದ್ವಿತೀಯ ಬಿ.ಎಡ್. ಪ್ರಶಿಕ್ಷಣಾರ್ಥಿ ಜಾಸ್ಮಿನ್ ರೇಷ್ಮಾ ಕ್ರಾಸ್ತ್ರ ಇವರು ಮಾತನಾಡುತ್ತಾ “ ಜೀವನದಲ್ಲಿ ಯಾರೇ ಆಗಿದ್ದರೂ ತಪ್ಪುಗಳನ್ನು ಬಿಟ್ಟು ಒಳ್ಳೆಯ ದಾರಿಗೆ ಬಂದರೆ ಅವರು ಜಗತ್ತಿಗೆ ಮಾದರಿಯಾಗುತ್ತಾರೆ. ವಾಲ್ಮೀಕಿ ಬರೆದ ರಾಮಾಯಣ ಕೇವಲ ಕಥೆಯಲ್ಲ, ಅದು ಸತ್ಯ, ಧರ್ಮ, ಕರುಣೆ, ಧೈರ್ಯ, ಸೇವೆ ಮತ್ತು ಆದರ್ಶದ ಜೀವನವನ್ನು ಕಲಿಸುವ ಮಾರ್ಗದರ್ಶಕ ” ಎಂದರು. ವೇದಿಕೆಯಲ್ಲಿ ವಿದ್ಯಾರ್ಥಿ ಉಪನಾಯಕಿ ಸಾಯಿಸ್ಕೃತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವರ್ಗ ಹಾಗೂ ಪ್ರಥಮ ಮತ್ತು ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ ಕಾವ್ಯಶ್ರೀ ಶೆಟ್ಟಿ ಸ್ವಾಗತಿಸಿ, ಚೈತನ್ಯ ಅತಿಥಿ ಪರಿಚಯಿಸಿ, ಇಂದುಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ಯಶಸ್ವಿನಿ ವಂದಿಸಿದರು.