ಅಳದಂಗಡಿಯ ಅನುಷಾ ಎಲ್. ಅವರಿಗೆ ಪಿ.ಎಚ್.ಡಿ ಪದವಿ

0

ಅಳದಂಗಡಿ: ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಅನುಷಾ ಎಲ್. ಅವರು ಮಂಡಿಸಿದ “A study on N-Covering Zagreb Indices and Posets of a Graph using Mixed Degree Conditions” ಎಂಬ ಮಹಾ ಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (Manipal Academy of Higher Education) ವಿಶ್ವವಿದ್ಯಾನಿಲಯವು ಅ. 6ರಂದು ಪಿ.ಎಚ್.ಡಿ. ಪದವಿ ಪ್ರದಾನ ಮಾಡಿದೆ.

ಈ ಸಂಶೋಧನಾ ಕಾರ್ಯಕ್ಕೆ ಡಾ. ಸಾಯಿನಾಥ್ ಉಡುಪ ಎನ್.ವಿ. ಹಾಗೂ ಡಾ. ಪೃಥ್ವಿರಾಜ್ ಎಂ. ಅವರು ಮಾರ್ಗದರ್ಶನ ನೀಡಿದ್ದರು. ಅವರು ಬೆಳ್ತಂಗಡಿ ತಾಲೂಕಿನ ಪಿಲ್ಯ ಗ್ರಾಮ, ಬರಾಯದ ಲಕ್ಷ್ಮಣ ಪೂಜಾರಿ ಮತ್ತು ಲೀಲಾವತಿ ದಂಪತಿಯ ದ್ವಿತೀಯ ಪುತ್ರಿಯಾಗಿದ್ದು, ಅಳದಂಗಡಿಯ ಸಿವಿಲ್ ಇಂಜಿನಿಯರ್ ಪ್ರಸಾದ್ ಪೂಜಾರಿ ಅವರ ಪತ್ನಿಯಾಗಿದ್ದಾರೆ.

ಪ್ರಾಥಮಿಕ ಶಿಕ್ಷಣವನ್ನು ಸೂಳಬೆಟ್ಟು ಮತ್ತು ಬಡಗಕಾರಂದೂರು ಶಾಲೆಗಳಲ್ಲಿ ಮುಗಿಸಿರುವ ಅವರು, ಉಜಿರೆ SDM ಕಾಲೇಜಿನಲ್ಲಿ ಬಿ.ಎಸ್.ಸಿ. ಹಾಗೂ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಎಂ.ಎಸ್.ಸಿ ಗಣಿತಶಾಸ್ತ್ರ ಪದವಿ ಪಡೆದಿದ್ದಾರೆ.

ಇವರು 2018ರಲ್ಲಿ ಕೆ -ಸೆಟ್ (K-SET) ಹಾಗು 2021ರಲ್ಲಿ ನಡೆದ ಕರ್ನಾಟಕ ಸರ್ಕಾರದ ಅಸಿಸ್ಟೆಂಟ್ ಪ್ರೊಫೆಸರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಂದಾಪುರದಲ್ಲಿ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ಅನುಷಾ ಎಲ್ ಅವರ ಈ ಸಾಧನೆಗೆ ಕುಟುಂಬಸ್ಥರು, ಸಹೋದ್ಯೋಗಿಗಳು ಹಾಗೂ ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here