ಬೆಳ್ತಂಗಡಿ: ತಾಲೂಕಿನ ಲಾಯಿಲ ಗ್ರಾಮದ ಎರಡೂವರೆ ವರ್ಷದ ಮೋಶ್ವಿ ಪಿ. ಅವರು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸಾಧನೆ ಮಾಡಿ ಐಬಿಆರ್ ಅಚೀವರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

10 ಅನ್ವೇಷಕರನ್ನು, 13 ಸ್ವಾತಂತ್ರ್ಯ ಹೋರಾಟಗಾರರು, 26 ವಾಹನಗಳು, 18 ಪಕ್ಷಿಗಳು, 10 ಆಕಾಶ ವಸ್ತುಗಳು, 7 ವೃತ್ತಿ, 17 ದೇಶೀಯ ಪ್ರಾಣಿ, 12 ಕೀಟ, 12 ಕಾಡು ಪ್ರಾಣಿ, 76 ಇತರ ವಸ್ತುಗಳು, 26 ತರಕಾರಿ, 22 ಪಕ್ಷಿ, 10 ಕೆಲಸ, 18 ಹೂವು, 12 ಹಣ್ಣು, ವರ್ಣಮಾಲೆಯ ಅಕ್ಷರಗಳು, 1ರಿಂದ 10ರವರೆಗೆ ಎಣಿಕೆ, 15 ಜೀವಿಗಳ ಧ್ವನಿಗಳ ಅನುಕರಣೆ ಹಾಗೂ 11 ರಾಷ್ಟ್ರೀಯ ಚಿಹ್ನೆಗಳನ್ನು ಎರಡೂವರೆ ವರ್ಷದಲ್ಲಿಯೇ ಗುರುತಿಸಿರುವುದನ್ನು ಪರಿಗಣಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಅಚೀವರ್ ಪ್ರಶಸ್ತಿ ನೀಡಲಾಗಿದೆ.

ಮೋಶ್ವಿ ಪಿ. ಅವರು ಐಐಟಿ ಬಾಂಬೆಯಲ್ಲಿ ಸಂಶೋಧನಾ ವೃತ್ತಿಯಲ್ಲಿ ತೊಡಗಿರುವ ಪಿಹೆಚ್‌ಡಿ ಪದವೀಧರ ಪ್ರತೀಕ್ ಹಾಗೂ ಉಪನ್ಯಾಸಕಿ ತೇಜಸ್ವಿನಿ ದಂಪತಿಯ ಪುತ್ರಿಯಾಗಿದ್ದು, ನಿವೃತ್ತ ಅಧ್ಯಾಪಕ ಕೆ. ಪುಟ್ಟಣ್ಣ ನಾಯ್ಕ ಹಾಗೂ ಅಂಗನವಾಡಿ ಕಾರ್ಯಕರ್ತೆ ಬಿ. ರೇವತಿ ದಂಪತಿಯ ಮತ್ತು ವಿಟ್ಲದ ಇಡ್ಕಿದು ಸೇವಾ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ್ ನಾಯ್ಕ ಎಸ್. ಹಾಗೂ ಗೀತಾ ದಂಪತಿಯ ಪ್ರೀತಿಯ ಮೊಮ್ಮಗಳು. ಸಾಫ್ಟ್ ವೇರ್ ಇಂಜಿನಿಯರ್ ಪರ್ಜನ್ಯ ಅವರು ಮೋಶ್ವಿ ಪಿ. ಅವರ ಚಿಕ್ಕಪ್ಪ.