ಅ. 8-10: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ವಿಭಾಗದಿಂದ ಅಂತರರಾಷ್ಟ್ರೀಯ ವಿಚಾರ ಸಂಕಿರಣ- ಸುಸ್ಥಿರ ಸಮಾಜಕ್ಕಾಗಿ ರಸಾಯನಶಾಸ್ತ್ರ ಸಂಶೋಧನೆ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಇದೇ ತಿಂಗಳು ಅ. 8, 9 ಮತ್ತು 10ರಂದು ‘ಇನೋವೇಷನ್ಸ್ ಇನ್ ಕೆಮಿಸ್ಟ್ರಿ ಮೆಟೀರಿಯಲ್ಸ್ ಆ್ಯಂಡ್ ಮೆಡಿಸಿನ್ಸ್ ಫಾರ್ ಸಸ್ಟೇನೇಬಲ್ ಸೊಸೈಟಿ’ ಶೀರ್ಷಿಕೆಯಡಿ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಿದೆ. ಭೌತಿಕ ವಸ್ತು-ಉತ್ಪನ್ನ-ಔಷಧೀಯ ನೆಲೆಗಳನ್ನು ಆಧರಿಸಿ ರಸಾಯನಶಾಸ್ತ್ರ ಶೈಕ್ಷಣಿಕ ವಲಯದಲ್ಲಿ ನಡೆಯುವ ಸಂಶೋಧನೆಯ ಹೆಜ್ಜೆಗಳು ಸುಸ್ಥಿರ ಸಮಾಜ ನಿರ್ಮಾಣದೊಂದಿಗಿರಬೇಕು ಎಂಬ ಕೇಂದ್ರ ಆಶಯದೊಂದಿಗೆ ಈ ವಿಚಾರ ಸಂಕಿರಣ ಆಯೋಜಿತವಾಗುತ್ತಿದೆ.

ಅ. 8ರಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಇಂದ್ರಪ್ರಸ್ಥ ಸಭಾಂಗಣದಲ್ಲಿ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಜರ್ಮನಿಯ ಇನ್ಸ್ಟಿಟ್ಯೂಟ್ ಆಫ್ ಸಾಲಿಡ್ ಸ್ಟೇಟ್ ಫಿಸಿಕ್ಸ್ ಲೈಬ್ನಿಜ್‌ನ ಸಂಶೋಧಕ ಉಲ್ರಿಶ್ ಕೆ. ರೊಝಲರ್ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಶಿವರಾಮ ಹೊಳ್ಳ, ತಮಿಳುನಾಡಿನ ಕರೈಕುಡಿಯ ಸೆಚಿಟ್ರಲ್ ಎಲೆಕ್ಟ್ರೋ ಕೆಮಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ನಿರ್ದೇಶಕ ಡಾ.ರಮೇಶ್ ಕೆ. ಮತ್ತು ಗೋವಾದ ಸಿಂಗೆಂಟಾ ಬಯೋಸೈನ್ಸಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಭಾನು ಮಂಜುನಾಥ್ ನಾರಾಯಣ್ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಲಿದ್ದಾರೆ.

ನಚಿತರ ನಡೆಯುವ ಮೊದಲ ಗೋಷ್ಠಿಯಲ್ಲಿ ಜರ್ಮನಿಯ ಇನ್ಸ್ಟಿಟ್ಯೂಟ್ ಆಫ್ ಸಾಲಿಡ್ ಸ್ಟೇಟ್ ಫಿಸಿಕ್ಸ್ ಲೈಬ್ನಿಜ್‌ನ ಸಂಶೋಧಕ ಉಲ್ರಿಶ್ ಕೆ. ರೊಝಲರ್ ಅವರು ‘ಯೂಸಿಂಗ್ ಕ್ವಾಂಟಮ್ ಮೆಕ್ಯಾನಿಕ್ಸ್ ಫಾರ್ ಮೆಟೀರಿಯಲ್ಸ್ ಸಿಮ್ಯುಲೇಷನ್’ ಕುರಿತು ಆರಂಭಿಕ ಪ್ರಧಾನ ಆಶಯಗಳನ್ನು ಮಂಡಿಸಲಿದ್ದಾರೆ. ಭೌತಜಗತ್ತಿನ ವಸ್ತುಗಳ ಮಿತವ್ಯಯದ ಮಾದರಿಯೊಂದಿಗಿನ ಸಂಶೋಧನಾತ್ಮಕ ಹೆಜ್ಜೆಗಳು ತಾಂತ್ರಿಕತೆ ಮತ್ತು ರಾಸಾಯನಿಕತೆಯನ್ನು ಸುಸ್ಥಿರ ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗಿಸುವ ಹೊಳಹುಗಳು ಈ ಗೋಷ್ಠಿಯಲ್ಲಿ ಚರ್ಚಿತವಾಗಲಿವೆ.

ನಂತರದ ಗೋಷ್ಠಿಯಲ್ಲಿ ‘ಫುಡ್ ಕೆಮಿಸ್ಟ್ರಿ ಆ್ಯಂಡ್ ಸಸ್ಟೇನೇಬಲ್ ಅಗ್ರಿಟೆಕ್ ರೆವ್ಯುಲುಷನ್: ಸಸ್ಟೇನೇಬಲ್ ಇನೋವೇಷನ್ ಇನ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್’ ಬಗ್ಗೆ ಗೋವಾದ ಸಿಂಗೆಂಟಾ ಬಯೋಸೈನ್ಸಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಭಾನು ಮಂಜುನಾಥ್ ನಾರಾಯಣ್ ಎರಡನೇ ಪ್ರಧಾನ ಆಶಯ ಭಾಷಣ ಪ್ರಸ್ತುತಪಡಿಸಲಿದ್ದಾರೆ.

ಮಧ್ಯಾಹ್ನ ನಡೆಯುವ ಮೂರನೇ ಗೋಷ್ಠಿಯಲ್ಲಿ ತಮಿಳುನಾಡಿನ ಕರೈಕುಡಿಯ ಸೆಚಿಟ್ರಲ್ ಎಲೆಕ್ಟ್ರೋ ಕೆಮಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ನಿರ್ದೇಶಕ ಡಾ.ರಮೇಶ್ ಕೆ ಅವರು ಎಲೆಕ್ಟ್ರೋ ಕೆಮಿಕಲ್ ಟೆಕ್ನಾಲಜಿಸ್ ಫಾರ್ ಸಸ್ಟನೇಬಲ್ ಫ್ಯೂಚರ್’ ಕುರಿತು ಪ್ರಧಾನ ಆಶಯ ಮಂಡಿಸಲಿದ್ದಾರೆ. ನಂತರ ನಡೆಯುವ ಗೋಷ್ಠಿಯಲ್ಲಿ ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಐರಿಷಿ ಎನ್.ಎನ್.ನಂಬೂದ್ರಿ ಅವರು ‘ಫಂಕ್ಷನಲೈಜಡ್ ಪಾಲಿಸೈಕ್ಲಿಕ್ ಕೇಜ್ ಕಂಪೌಚಿಡ್ಸ್ ಆ್ಯಜ್ ಪ್ರಾಸ್ಪೆಕ್ಟಿವ್ ಹೈ ಎನರ್ಜಿ ಡೆನ್ಸಿಟಿ ಮೆಟೀರಿಯಲ್ಸ್’ ಬಗ್ಗೆ ಮಾತನಾಡಲಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ, ಮುಖ್ಯಸ್ಥ ಡಾ.ಬೋಜಾ ಪ್ರಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರದ ಗೋಷ್ಠಿಯಲ್ಲಿ ‘ಟ್ರೆಡಿಷನಲ್ ಅಪಾರ್ಚುನಿಟಿಸ್ ಇನ್ ನ್ಯಾಚುರಲ್ ಪ್ರಾಡಕ್ಟ್ಸ್ ಡ್ರಿವನ್ ಡ್ರಗ್ ಡಿಸ್ಕವರಿ’ ಕುರಿತು ಹೈದ್ರಾಬಾದ್‌ನ ಸಿಎಸ್‌ಐಆರ್ ಐಸಿಟಿಯ ಸೀನಿಯರ್ ಪ್ರಿನ್ಸಿಪಲ್ ಅಸಿಸ್ಟೆಂಟ್ ಡಾ.ಸಂದೀಪ್ ಬಿ. ಭರಾಟೆ ಮಾತನಾಡಲಿದ್ದಾರೆ. ಮಲೇಷಿಯಾದ ಇಂಟರ್‌ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯ ಸ್ಕೂಲ್ ಆಫ್ ಫಾರ್ಮಸಿ ಸಹ ಪ್ರಾಧ್ಯಾಪಕ ಡಾ.ತ್ಯಾಗರಾಜನ್ ಮಾಧವೇಶ್ವರನ್ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ಸಂಶೋಧನಾ ಪ್ರಬಂಧಗಳು ಮಂಡಿತವಾಗಲಿವೆ.

ಅ. 9ರಂದು ನಡೆಯಲಿರುವ ಗೋಷ್ಠಿಗಳಲ್ಲಿ ‘ಟ್ರಾನ್ಷಿಷನ್ ಮೆಟಲ್ ಕ್ಯಾಲ್ಕೋಜೆನೈಡ್ಸ್: ಫ್ರಮ್ ಸುಪರ್ ಕಂಡಕ್ಟಿವಿಟಿ ಟು ಆಲ್ಟರ್ ಮ್ಯಾಗ್ನೆಟಿಸಮ್’, ‘ಲಿಕ್ವಿಡ್ ಕ್ರಿಸ್ಟಲೈನ್ ನ್ಯಾನೋಪಾರ್ಟಿಕಲ್ಸ್ ಆಜ್ ಎ ವರ್ಸಾಟೈಲ್ ಪ್ಲಾಟ್‌ಫಾರ್ಮ್ ಫಾರ್ ಡ್ರಗ್ ಡೆಲಿವರಿ’ ಕುರಿತು ಕ್ರಮವಾಗಿ ಜರ್ಮನಿಯ ಯುನಿವರ್ಸಿಟಿ ಆಫ್ ಲೆಪ್ಜಿಗ್‌ನ ಫೆಲಿಕ್ಸ್ ಬ್ಲೋಚ್ ಇನ್ಸ್ಟಿಟ್ಯೂಟ್ ಸಂಶೋಧಕ ಡಾ.ಸಹನಾ ರೋಝ್ಲರ್, ಮಲೇಷಿಯಾದ ಇಂಟರ್‌ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯ ಸ್ಕೂಲ್ ಆಫ್ ಫಾರ್ಮಸಿ ಸಹ ಪ್ರಾಧ್ಯಾಪಕ ಡಾ.ತ್ಯಾಗರಾಜನ್ ಮಾಧವೇಶ್ವರನ್ ಮಾತನಾಡಲಿದ್ದಾರೆ.

ಬೆಂಗಳೂರಿನ ವಿಧಾತ್ರಿ ಫಾರ್ಮಾ ಎನ್ವಿರೊ ಸಾಲ್ಯುಷನ್ಸ್ ಸಂಸ್ಥಾಪಕ ಡಾ.ಮಧು ಗಣೇಶ್, ಇಟಲಿಯ ಯುನಿವರ್ಸಿಟಿ ಆಫ್ ಕೆಮರಿನೊದ ಸ್ಕೂಲ್ ಆಫ್ ಫಾರ್ಮಸಿಯ ಪ್ರಾಧ್ಯಾಪಕ ಡಾ.ಮಿಷಿಲಾ ಬುಕ್ಸ್ಯೋಂನಿ ಗೋಷ್ಠಿಗಳ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ನಡೆಯುವ ಪ್ಲೆನರಿ ಗೋಷ್ಠಿಗಳನ್ನು ಡಾ.ಮಧು ಗಣೇಶ್, ಓಎನ್‌ಜಿಸಿಯ ಚೀಫ್ ಜನರಲ್ ಮ್ಯಾನೇಜರ್ ಸುಬ್ರಹ್ಮಣ್ಯ ಭಟ್, ಡಾ.ವಿಜೇಶ್ ಎಂ. ನಿರ್ವಹಿಸಲಿದ್ದಾರೆ. ನಂತರ ಸಂಶೋಧನಾ ಪ್ರಬಂಧಗಳು ಮಂಡಿತವಾಗಲಿದ್ದು, ಪೋಸ್ಟರ್ ಪ್ರಸ್ತುತಿಗೊಳ್ಳಲಿವೆ. ಸ್ಮಾರ್ಟ್ ಮೆಂಬ್ರೇನ್ಸ್, ಸ್ಮಾರ್ಟ್ರ್ ಸೊಲ್ಯುಷನ್ಸ್, ಹಾರ್ನೆಸಿಂಣ್ ಜ್ವಿಟಿರಿಯಾನಿಕ್ ಪಾಲಿಮರ್ಸ್ ಡ್ಯುಯಲ್ ಆ್ಯಂಟಿ ಇನ್ಫಂಮೆಟರಿ, ಆ್ಯಂಟಿ ಕ್ಯಾನ್ಸರ್ ಪೊಟೆನ್ಷಿಯಲ್ ಆಫ್ ನಾವೆಲ್ ಥಿಯೊನೊಪಿರಿಮಿಡೈನ್ಸ್ ಬೈ ಇನ್‌ಹಿಬಿಟಿಂಗ್ ಸೈಕ್ಲೋಕ್ಸಿಗೆನೇಸ್ 2 ಎಚಿಝೈನ್ ಕುರಿತು ತಾಂತ್ರಿಕ ಗೋಷ್ಠಿಗಳು ನಡೆಯಲಿವೆ.

ಸುರತ್ಕಲ್‌ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಅರುಣ್ ಇಸ್ಲೂರ್, ಜಾರ್ಖಂಡ್‌ನ ಬಿಐಟಿಯ ಸಹಾಯಕ ಪ್ರಾಧ್ಯಾಪಕ ಡಾ.ಪ್ರಾಣ್ ಕಿಶೋರ್ ದೇವ್, ಮೈಸೂರಿನ ಜೆಎಸ್‌ಎಸ್ ಸಂಸ್ಥೆಯ ಸಹಪ್ರಾಧ್ಯಾಪಕ ಡಾ.ರಮೀತ್ ರಾಮು, ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯದ ರಿಸರ್ಚ್ ಆ್ಯಂಡ್ ಇನೋವೇಷನ್ ಕೌನ್ಸಿಲ್‌ನ ನಿರ್ದೇಶಕ ಡಾ.ಪ್ರವೀಣ್ ಬಿ.ಎಂ ಮಾತನಾಡಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಡಾ.ಜಗದೀಶ್ ಪ್ರಸಾದ್, ಪಯನೂರು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ವಿಜೇಶ್ ಎ.ಎಂ ಅಧ್ಯಕ್ಷತೆ ವಹಿಸಲಿದ್ದಾರೆ.

ಮೂರನೇ ದಿನದ ತಾಂತ್ರಿಕ ಗೋಷ್ಟಿಯಲ್ಲಿ ಇಟಲಿಯ ಯುನಿವರ್ಸಿಟಿ ಆಫ್ ಕೆಮರಿನೊದ ಸ್ಕೂಲ್ ಆಫ್ ಫಾರ್ಮಸಿಯ ಪ್ರಾಧ್ಯಾಪಕ ಡಾ.ಮಿಷಿಲಾ ಬುಕ್ಸ್ಯೋಂನಿ, ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಡಾ.ವಿಶಾಲಾಕ್ಷಿ ಬಿ., ಬೆಂಗಳೂರಿನ ಆ್ಯಂಥಮ್ ಬಯೋಸೈನ್ಸ್ ಪ್ರೈವೇಟ್ ಲಿಮಿಟೆಡ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಡಾ.ಸುಮೇಶ್ ಈಸ್ವರನ್ ಮಾತನಾಡಲಿದ್ದಾರೆ. ಜಾರ್ಖಂಡ್‌ನ ಬಿಐಟಿಯ ಸಹಾಯಕ ಪ್ರಾಧ್ಯಾಪಕ ಡಾ.ಪ್ರಾಣ್ ಕಿಶೋರ್ ದೇವ್, ಬೆಂಗಳೂರಿನ ರ‍್ಕ್ಜೆನ್ ಫಾರ್ಮಾ ಪ್ರೈವೇಟ್ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಡಾ.ಸತ್ಯ ಪ್ರಸನ್ನ ಅಧ್ಯಕ್ಷತೆ ವಹಿಸಲಿದ್ದಾರೆ.

ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ಜರ್ಮನಿಯ ಲಿಪ್ಜಿಂಗ್ ವಿಶ್ವವಿದ್ಯಾನಿಲಯದ ಫೆಲಿಕ್ಸ್ ಬ್ಲೊಶ್ ಇನ್ಸ್ಟಿಟ್ಯೂಟ್ ನ ಸಂಶೋಧಕಿ ಡಾ.ಸಹನಾ ರೊಝಲರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಶಿವರಾಮ ಹೊಳ್ಳ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ವಿಶ್ವನಾಥ ಪಿ. ವಹಿಸಲಿದ್ದಾರೆ.

LEAVE A REPLY

Please enter your comment!
Please enter your name here