ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ, ಹಲವಾರು ವರ್ಷಗಳಿಂದ ಆಂಬ್ಯುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಜಲೀಲ್ ಹಾಗೂ ಹಮೀದ್ ಎಂಬವರಿಗೆ ಎಸ್.ಐ.ಟಿ ನೋಟೀಸ್ ನೀಡಿದೆ.
ಈ ಸಂಬಂಧ ಜಲೀಲ್ ಬಾಬಾ ಅವರು ತನ್ನ ಆಂಬ್ಯುಲೆನ್ಸ್ ನಲ್ಲೇ ವಿಚಾರಣೆಗೆ ಆಗಮಿಸಿದ್ದಾರೆ. ಇದರ ಬೆನ್ನಲ್ಲೇ ಹಮೀದ್ ಕೂಡ ವಿಚಾರಣೆಗೆ ಅ.4ರಂದು ಆಗಮಿಸಿದ್ದಾರೆ. ಚಿನ್ನಯ್ಯ ಆರೋಪಿಸಿದ ಅವಧಿಯಲ್ಲಿ ನಡೆದ ಯು.ಡಿ.ಆರ್. ಪ್ರಕರಣಗಳಿಗೆ ಸಂಬಂಧಿಸಿದಂತೆ ಶವವನ್ನು ಆಸ್ಪತ್ರೆಗೆ ಸಾಗಿಸಿರುವ ಬಗ್ಗೆ ಆಂಬ್ಯುಲೆನ್ಸ್ ಚಾಲಕರ ಹೇಳಿಕೆಯನ್ನು ಎಸ್.ಐ.ಟಿ ಪಡೆಯಲಿದೆ.