ಉಜಿರೆ: ಎಸ್.ಎಸ್.ಎಫ್ ಕರ್ನಾಟಕ ರಾಜ್ಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಕ್ಯಾಂಪಸ್ ಸೀನಿಯರ್ ಕನ್ನಡ ಹಾಡು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ತನ್ನದಾಗಿಸಿಕೊಂಡ ಮಾಚಾರು ಜಮಾಅತಿನ ಯುವ ಪ್ರತಿಭೆ ನೌಶಾದ್ ಬಿ. ಜಿ. ಹಮೀದ್ ಗೋಳಿತೊಟ್ಟು ಅವರ ಪುತ್ರ ಇವರನ್ನು ಮಾಚಾರು ಜಮಾಅತ್ ಸಮಿತಿಯಿಂದ ಜುಮಾ ಬಳಿಕ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಖತೀಬುಸ್ತಾದ ಸಲೀಮ್ ಸಖಾಫಿ ಭದ್ರಾವತಿ, ಜಮಾಅತ್ ಅಧ್ಯಕ್ಷ ಬಿ. ಎಮ್. ಇಲ್ಯಾಸ್, ಗೌರವಾಧ್ಯಕ್ಷ ಹಂಝ ಬಿ.ಎ., ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್, ಕೋಶಾಧಿಕಾರಿ ಹಸೈನಾರ್ ಟೈಲ್ಸ್, ಅಕ್ಬರ್ ಬದ್ರಿಯ, ಸದರ್ ಉಸ್ತಾದರಾದ ಹೈದರ್ ಹಿಷಾಮಿ, ಎಸ್.ವೈ.ಎಸ್ ಅಧ್ಯಕ್ಷ ಅಬ್ದುಲ್ ರಹೀಮ್ ಹನೀಫಿ, ಡಿ.ಎಚ್. ಇಸ್ಮಾಯಿಲ್ ಸಖಾಫಿ, ಉಜಿರೆ ಸರ್ಕಲ್ ಅಧ್ಯಕ್ಷ ಸಲೀಮ್ ಮಾಚಾರ್, ಕಬೀರ್ ಮಿಸ್ಬಾಹಿ, ಉಸ್ಮಾನ್ ಬಿ.ಎಮ್. ಬೆಳಾಲು ಹಾಗೂ ಜಮಾತರು ಉಪಸ್ಥಿತರಿದ್ದರು.