ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಬೆಳ್ತಂಗಡಿ ಶಾಖೆಯ ಉದ್ಘಾಟನೆ

0

ಬೆಳ್ತಂಗಡಿ: ಮಂಗಳೂರು ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್‌ ಸೊಸೈಟಿಯ ಬೆಳ್ತಂಗಡಿ ಶಾಖೆಯ ಉದ್ಘಾಟನಾ ಸಮಾರಂಭ ಅ.1ರಂದು ಬೆಳ್ತಂಗಡಿ ಚರ್ಚ್ ಬಳಿಯ ನೊರೋನಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.

ಬೆಳ್ತ೦ಗಡಿ ಶಾಖಾ ಕಚೇರಿಯನ್ನು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಬಾರ್ಕೂರು ಆಡಳಿತ ಮೊಕ್ತೇಸರ ಅಧ್ಯಕ್ಷ ಲಕ್ಷ್ಮಣ್ ಕರಾವಳಿ ದೀಪಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕಚ್ಚೂರು ಕ್ರೆಡಿಟ್ ಕೋ-ಅಪರೇಟೀವ್ ಸೊಸೈಟಿ ಕಳೆದ 30 ವರ್ಷಗಳಿಂದ ಅತ್ಯುನ್ನತ ಪ್ರಗತಿಯಲ್ಲಿ ಸಾಗುತ್ತಿದ್ದು, ಸೊಸೈಟಿಯ ಶಾಖೆ ವಿಸ್ತರಣೆಗೆ ಯೋಜನೆ ಹಾಕಿಕೊಳ್ಳಬೇಕು, ಪ್ರತಿ ಎರಡು ವರ್ಷಕ್ಕೊಮ್ಮೆ ಒಂದು ಶಾಖೆಯಂತೆ, ಹತ್ತರಿಂದ ಹದಿನೈದು ಶಾಖೆಗಳು ಶೀಘ್ರ ಆಗಬೇಕಾಗಿದೆ. ಇಂದು ಆರಂಭ ಗೊಂಡ ಬೆಳ್ತಂಗಡಿ ಶಾಖೆ ಕೋಟಿಗೂ ಹೆಚ್ಚು ವ್ಯವಹಾರ ನಡೆಸಿ ಪ್ರಗತಿ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.

ಸಭಾಧ್ಯಕ್ಷತೆಯನ್ನು ಕಚೂರು ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಚಂದ್ರಶೇಖ‌ರ್ ಕೆ. ವಹಿಸಿ, ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಕಂಪ್ಯೂಟರೀಕರಣ ಉದ್ಘಾಟನೆಯನ್ನು ಭಂಡಾರಿ ಮಹಾಮಂಡಲ ಬಾರ್ಕೂರು ಅಧ್ಯಕ್ಷ ಶಶಿಧರ ಭಂಡಾರಿ ಕಾರ್ಕಳ ನೇರವೇರಿಸಿದರು. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್‌ ಅಧ್ಯಕ್ಷ ಜಯಾನಂದ ಗೌಡ ಪ್ರಜ್ವಲ್ಪ ಪ್ರಥಮ ಠೇವಣಿ ಬಿಡುಗಡೆಗೊಳಿಸಿದರು, ಬೆಳ್ತಂಗಡಿ ಭಂಡಾರಿ ಸಮಾಜ ಸಂಘ ಅಧ್ಯಕ್ಷ ಉಮೇಶ್ ಭಂಡಾರಿ, ಜಾಕಿಮ್ ನೊರೋನಾ ಮಾಲಕರು, ನೊರೋನಾ ಕಾಂಪ್ಲೆಕ್ಸ್, ಬೆಳ್ತಂಗಡಿ, ಬೆಳ್ತಂಗಡಿ ಭಂಡಾರಿ ಸಮಾಜ ಸಂಘದ ಮಾಜಿ ಅಧ್ಯಕ್ಷರಾದ ಎ. ಪೂವಪ್ಪ ಭಂಡಾರಿ ಪಣೆಜಾಲು, ಕೇಶವ ಭಂಡಾರಿ, ಭಂಡಾರಿ ಯುವ ವೇದಿಕೆ ಬೆಳ್ತಂಗಡಿ ಅಧ್ಯಕ್ಷ ವಿಶ್ವನಾಥ ಭಂಡಾರಿ, ಸವಿತಾ ಸಮಾಜ ಬೆಳ್ತಂಗಡಿ ಉಪಾಧ್ಯಕ್ಷ ಜಿ. ಎಸ್. ಪೂವಪ್ಪ ಭಂಡಾರಿ ಮದ್ದಡ್ಕ, ಜೇಸಿ ಅಶೋಕ್ ಗುಂಡಿಯ ವಲಯ ನಿರ್ದೇಶಕರು, ವ್ಯವಹಾರ ವಿಭಾಗ, ವಲಯ 15, ಜೆಸಿ ಇಂಡಿಯಾ, ನಾರಾವಿ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ ಉಪಸ್ಥಿತರಿದ್ದರು.

ಉಪಾಧ್ಯಕ್ಷ ರಾಮ ಭಂಡಾರಿ ಹೆಚ್., ಪ್ರಧಾನ ವ್ಯವಸ್ಥಾಪಕ ಪದ್ಮನಾಭ ಎಂ., ನಿರ್ದೇಶಕರಾದ ರಘುವೀರ ಭಂಡಾರಿ, ಶಶಿಧರ ಭಂಡಾರಿ ಕಾರ್ಕಳ, ಬಿ.ಎಸ್. ಭಂಡಾರಿ, ಶೇಖರ್ ಹೆಚ್‌, ಕುಮಾ‌ರ್ ಭಂಡಾರಿ, ಅಶೋಕ್ ಜಿ., ದಿವಾಕರ ಶಂಬೂ‌ರ್, ರಮೇಶ್ ಭಂಡಾರಿ ಸಿ.ಎಂ, ಹರೀಶ್ ಭಂಡಾರಿ, ರಮಾನಾಥ ಭಂಡಾರಿ, ರವೀಂದ್ರನಾಥ್ ಉಳ್ಳಾಲ್, ಶಾಂತ ಬಿ.ಎಸ್., ರಾಜಾ ಬಂಟ್ವಾಳ, ಶಶಿಕಲಾ ಉಪಸ್ಥಿತರಿದ್ದರು. ಸತೀಶ್ ಭಂಡಾರಿ ನಾಳ ಪ್ರಾರ್ಥಿಸಿ, ನಿರ್ದೇಶಕ ರಾಜಾ ಬಂಟ್ವಾಳ ಸ್ವಾಗತಿಸಿದರು. ಸಿ.ಇ.ಒ ಪದ್ಮನಾಭ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ಭಂಡಾರಿ ಕಾಯರ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here