ಬೆಳ್ತಂಗಡಿ: ನವರಾತ್ರಿ ಹಬ್ಬದ ಪ್ರಯುಕ್ತ ಸುದ್ದಿ ಸಂಸ್ಥೆ ವತಿಯಿಂದ ನೃತ್ಯ ವೈಭವ ಕಾರ್ಯಕ್ರಮ ಅ.2ರಂದು ಬೆಳ್ತಂಗಡಿ ಸುವರ್ಣ ಆರ್ಕೇಡ್ ಸಪ್ತಪದಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಸಿಇಒ ಸಿಂಚನಾ ಊರುಬೈಲು ವಹಿಸಿದ್ದರು.

ಲಯನ್ಸ್ ಕ್ಲಬ್ ಬೆಳ್ತಂಗಡಿಯ ನಿಯೋಜಿತ ಅಧ್ಯಕ್ಷ ರಘುರಾಮ್ ಶೆಟ್ಟಿ ಸಾಧನಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶ್ರದ್ಧಾ ಎಂಟರ್ ಪ್ರೈಸಸ್ ಮಾಲಕ ವಸಂತ ಶೆಟ್ಟಿ ಶ್ರದ್ಧಾ, ಉಜಿರೆ ಬೀಟ್ ರಾಕರ್ಸ್ ಅಕಾಡೆಮಿಯ ಮಾಲಕ ಜಿತೇಶ್ ಕುಮಾರ್, ಖ್ಯಾತ ನೃತ್ಯ ಗುರು ಶಾಂತ ಪಡ್ವೆಟ್ನಾಯ, ಉಜಿರೆ ಮಹಾವೀರ ಗ್ರೂಪ್ಸ್ ಮಾಲಕಿ ಪುನೀತ ಪ್ರಭಾಕರ ಹೆಗ್ಡೆ ಉಪಸ್ಥಿತರಿದ್ದರು.

ಬೆಳ್ತಂಗಡಿ ಲಯನ್ಸ್ ಕ್ಲಬ್ ನಿಯೋಜಿತ ಅಧ್ಯಕ್ಷ ರಘುರಾಮ್ ಶೆಟ್ಟಿ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ನೃತ್ಯ ವೈಭವಕ್ಕೆ ವಿಶಿಷ್ಟವಾದ ಸ್ಥಾನವಿದೆ, ಭಾರತೀಯ ಸಂಸ್ಕೃತಿಗೆ ಒಳಪಟ್ಟ ನೃತ್ಯವನ್ನು ಆಯೋಜನೆ ಮಾಡಿದ್ದಾರೆ, ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯುತ್ತಮ ಪತ್ರಿಕೆಯಾಗಿ ಹೊರಬಂದಿದೆ ಕಾಲಕ್ಕೆ ತಕ್ಕಂತೆ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತ ಬರುತ್ತಿದ್ದಾರೆ, ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.



ಉಜಿರೆ ಮಹಾವೀರ ಗ್ರೂಪ್ಸ್ ಮಾಲಕಿ ಪುನೀತ ಪ್ರಭಾಕರ್ ಹೆಗ್ಡೆ ಮಾತನಾಡಿ ಎಲ್ಲ ವಿಷಯ ಗೊತ್ತಿದ್ದರೂ ಕೂಡ ಸುದ್ದಿ ಬಿಡುಗಡೆ ಪತ್ರಿಕೆಯನ್ನು ಓದುವ ಹಂಬಲ ಇರುತ್ತದೆ. ನೃತ್ಯ ವೈಭವ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಮತ್ತಷ್ಟು ಅರ್ಥಪೂರ್ಣವಾಗಿದೆ.
ಬೆಳ್ತಂಗಡಿ ಶ್ರದ್ಧಾ ಎಂಟರ್ ಪ್ರೈಸಸ್ ಮಾಲಕ ವಸಂತ ಶೆಟ್ಟಿ ಶ್ರದ್ಧಾ ಮಾತನಾಡಿ ಜನತೆಯ ಮನೆ ಮಾತಾಗಿರುವ ಸುದ್ದಿ ಬಿಡುಗಡೆ ಪತ್ರಿಕೆ ಸಮಾಜಮುಖಿ ಕೆಲಸವನ್ನು ಮಾಡಿಕೊಂಡು ನಿರಂತರವಾಗಿ ಬರುತ್ತಿದೆ, ಲಯನ್ಸ್ ಸಂಸ್ಥೆಯ ಎಲ್ಲಾ ಸುದ್ದಿಯನ್ನು ಜನರಿಗೆ ತಲುಪುವಂತೆ ಸಹಕಾರ ಮಾಡಬೇಕು ಎಂದು ಹೇಳಿದರು.
ಸುದ್ದಿ ಬಿಡುಗಡೆ ಡಿಸೈನರ್ ತೇಜಸ್ವಿನಿ ಸ್ವಾಗತಿಸಿ, ಬೆಳ್ತಂಗಡಿ ಸುದ್ದಿ ಬಿಡುಗಡೆಯ ನಿರೂಪಕಿ ಶ್ರೇಯಾ ಶೆಟ್ಟಿ ನಿರೂಪಿಸಿ, ಬೆಳ್ತಂಗಡಿ ಸುದ್ದಿ ಬಿಡುಗಡೆ ಚಾನೆಲ್ ಮುಖ್ಯಸ್ಥ ದಾಮೋದರ್ ದೊಂಡೋಲೆ ಧನ್ಯವಾದವಿತ್ತರು.