ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮದ ಅಡ್ಕದಬೈಲು ಅಣ್ಣು ಪೂಜಾರಿ (84 ವರ್ಷ ) ಸೆ.27ರಂದು ನಿಧನರಾದರು. ಇವರು ಪ್ರಗತಿಪರ ಕೃಷಿಕರಾಗಿ, ಬದಿನಡೆ ನಾಗಬ್ರಹ್ಮ ದೇವಸ್ಥಾನ, ಕೋಟಿ ಚೆನ್ನಯ ಗರಡಿ ಹಾಗೂ ಕೊಡಮಣಿತ್ತಾಯ ದೈವಸ್ಥಾನದ ಪರಿಚಾರಕರಾಗಿ ಸೇವೆಯನ್ನು ಸಲ್ಲಿಸಿದ್ದರು. ಮೃತರು ಪತ್ನಿ ಕಲ್ಯಾಣಿ, ಮಕ್ಕಳಾದ ಪ್ರಶಾಂತ್, ಪುನೀತ್, ಶ್ವೇತಾ ಅವರನ್ನು ಅಗಲಿದ್ದಾರೆ.