






ಬೆಳ್ತಂಗಡಿ: ಕನ್ಯಾಡಿಯ ಹೊಟೇಲೊಂದರ ಕಾರ್ಮಿಕ ಕೊಪ್ಪಳ ಮೂಲದ ತಿಮ್ಮ ತಂತಿ (35) ಅವರು ನ. 25ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ನ. 24ರಂದು ವೈದ್ಯರಿಂದ ಔಷಧಥ್ ಪಡೆದು ಬಾಡಿಗೆ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ನ. 25ರಂದು ಬೆಳಗ್ಗೆ 11.30ರ ಸುಮಾರಿಗೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನವಾಗಲಿಲ್ಲ.








