ಬೆಳ್ತಂಗಡಿ: ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಿಬ್ಬಂದಿಗಳಿಗೆ ಕೌಶಲ್ಯ ತರಬೇತಿ ಶಿಬಿರ ಸೆ. 27ರಂದು ಬೆಳ್ತಂಗಡಿ ಮುಖ್ಯ ಕಚೇರಿಯ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಹೆನ್ರಿ ಲೋಬೊ ಉದ್ಘಾಟಿಸಿದರು. ತರಬೇತುದಾರರಾಗಿ ಮಂಗಳೂರಿನ ಸೋಪ್ಟ್ ವೇರ್ ಇಂಜಿನಿಯರ್ ಶ್ರೀಷಾ ಕೆ.ಎಂ. ಮತ್ತು ವಣಮಲಿ ಹೆಬ್ಬಾರ್ ಭಾಗವಹಿಸಿ ಕೌಶಲ್ಯ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಡೇನಿಸ್ ಸಿಕ್ವೆರಾ, ನಿರ್ದೇಶಕರಾದ ಜೇಮ್ಸ್ ಡಿಸೋಜಾ, ಜೋಸೆಫ್ ಸಲ್ಡನ್ಹ, ಹೆರಾಲ್ಡ್ ಪಿಂಟೋ, ವಿನ್ಸೆಂಟ್ ಪಿಂಟೋ, ಪ್ರಸಾದ್ ಪಿಂಟೋ, ಅಲ್ಫೋನ್ಸ್ ರೋಡ್ರಿಗಸ್, ತೊಮಸ್ ನೋರೋನ್ಹ, ವಿನಯ್ ಡಿಸೋಜಾ, ರಫಯೆಲ್ ವೇಗಸ್, ಪೌಲಿನ್ ರೇಗೋ, ಪ್ಲಾವಿಯ ಪೌಲ್ ಉಪಸ್ಥಿತರಿದ್ದರು. ಸಿಬ್ಬಂದಿಗಳು ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಐವನ್ ಗೊನ್ಸಲ್ವಿಸ್ ಸ್ವಾಗತಿಸಿದರು. ಮುಖ್ಯ ಕಚೇರಿ ವ್ಯವಸ್ಥಾಪಕಿ ಶಾಂತಿ ಸಿ.ಡಿ. ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಡೇನಿಸ್ ಸಿಕ್ವೆರಾ ವಂದಿಸಿದರು.