ಧರ್ಮಸ್ಥಳ: ಗ್ರಾಮ ಪಂಚಾಯತ್ ಮಾನ್ವಿಶ್ರೀ ಸಂಜೀವಿನಿ ಮಹಿಳಾ ಒಕ್ಕೂಟದ 2024-2025ನೇ ಸಾಲಿನ ವಾರ್ಷಿಕ ಮಹಾಸಭೆ ಸೆ. 25ರಂದು ಒಕ್ಕೂಟದ ಅಧ್ಯಕ್ಷೆ ಧನಲಕ್ಷ್ಮೀ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. MSW ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಸಭೆಯನ್ನು ಪ್ರಾರಂಭಿಸಿ ಕೃಷಿಸಖಿ ಸುಚೇತಾ ಸ್ವಾಗತಿಸಿದರು. ಪಂಚಾಯತ್ ಲೆಕ್ಕ ಸಹಾಯಕಿ ಪ್ರಮೀಳಾ, ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಪ್ರತಿಮಾ, ವಲಯ ಮೇಲ್ವಿಚಾರಕಿ ವೀಣಾಶ್ರೀ, ಉಷಾ ಕಾಮತ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಕ್ಕೂಟದ ಅಧ್ಯಕ್ಷರು ಮತ್ತು ಗಣ್ಯರು ದೀಪಪ್ರಜ್ವಲಿಸಿದರು.

ನಂತರ ಪ್ರತಿಮಾ ಎನ್.ಆರ್.ಎಲ್.ಎಂ. ನ ಬಗ್ಗೆ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಎಲ್.ಸಿ.ಆರ್. ಪುಷ್ಪಾವತಿ ವಾರ್ಷಿಕ ವರದಿಯನ್ನು, ಪಶು ಸಖಿ ಯಶೋದ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿದರು.
ವಲಯ ಮೇಲ್ವಿಚಾರಕಿ ವೀಣಾಶ್ರೀ ಸಂಜೀವಿನಿ ಧ್ಯೇಯೊದ್ದೇಶಗಳನ್ನು ತಿಳಿಸಿದರು. ಬದುಕು ವಿಶೇಷ ಚೇತನ ಸಂಘದ ಅಧ್ಯಕ್ಷ ಜಗದೀಶ ನಾಯ್ಕ ವಿಶೇಷ ಚೇತನರಾಗಿದ್ದು, ಸಂಜೀವಿನಿಯ ಪ್ರೇರಣೆಯಿಂದ ಎಳನೀರು ವ್ಯಾಪಾರ ಮಾಡುತ್ತಿದ್ದು ಈಗ ಉಜಿರೆ, ಧರ್ಮಸ್ಥಳದಲ್ಲಿ ಹೋಂ ಸರ್ವಿಸ್ ಕೆಲಸ ಮಾಡುತ್ತಿದ್ದಾರೆ. ವಿಶೇಷ ಚೇತನರಾದರೂ ತಮ್ಮ ಛಲದಿಂದ ಸ್ವಾವಲಂಬಿ ಜೀವನ ನಡೆಸುತ್ತಿರುವ ಇವರಿಗೆ ಸನ್ಮಾನ ಮಾಡಲಾಯಿತು.

ಶ್ರೀ ದುರ್ಗಾ ಸಂಜೀವಿನಿ ಸಂಘಕ್ಕೆ ಸಮುದಾಯ ಬಂಡವಾಳ ನಿಧಿ ಸಾಲದ 3% ಬಡ್ಡಿಯ ಲಾಭಾ೦ಶವನ್ನು ವಿತರಿಸಲಾಯಿತು. ಬೆನಕ ಸಂಜೀವಿನಿ ಸಂಘದ ಸದಸ್ಯೆ ಸವಿತಾ ತಯಾರಿಸಿದ ಸವಿ ವೆಜ್ ಪಲ್ಯ ಮಸಾಲಾ ಪ್ರಾಡಕ್ಟ್ ನ್ನು ಮತ್ತು ನವದುರ್ಗ ಸಂಜೀವಿನಿ ಸಂಘದ ಸದಸ್ಯೆ ಹರಿನಾಕ್ಷಿ ಅವರು ತಯಾರಿಸಿದ ಪಪ್ಪಾಯ ಸೋಪ್ ನ್ನು ಬಿಡುಗಡೆಗೊಳಿಸಲಾಯಿತು.
ಉಷಾ ಕಾಮತ್ ಬ್ಯಾಂಕ್ ಇನ್ಶೂರೇನ್ಸ್ ಗಳ ಬಗ್ಗೆ ಮಾಹಿತಿ ನೀಡಿ ಸದಸ್ಯರ ಇನ್ಶುರೇನ್ಸ್ ಮಾಡಲಾಯಿತು. ವಿದ್ಯಾರ್ಥಿನಿ ಶ್ರುತಿ ಮಾದಕ ಮುಕ್ತ ಕರ್ನಾಟಕ ಪ್ರತಿಜ್ಞಾ ವಿಧಿಯನ್ನು ವಾಚಿಸಿದರು. ಸ್ವಚ್ಛತಾ ಅಭಿಯಾನ ಮತ್ತು ಲಿಂಗತ್ವ ಅಭಿಯಾನ ನಡೆಸಲಾಯಿತು. MSW ವಿದ್ಯಾರ್ಥಿಗಳು ಸಹಕಾರ ನೀಡಿದರು. MBK ಚಂದ್ರಾವತಿ ಕಾರ್ಯಕ್ರಮವನ್ನು ನಿರೂಪಿಸಿದರು. ವೀಣಾ ವಂದಿಸಿದರು.