ಉಜಿರೆ: ಸೆ. 25ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಸ್ವಯಂಸೇವಕರಿಗೆ ಒಂದು ದಿನದ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಮುಖ್ಯ ತರಬೇತುದಾರರಾಗಿ ಆಗಮಿಸಿದ ಮಂಗಳೂರಿನ ನ್ಯಾಯವಾದಿ ಮತ್ತು ಪ್ರಥಮ ಚಿಕಿತ್ಸಾ ತರಬೇತುದಾರರಾದ ಸಂತೋಷ್ ಪೀಟರ್ ಡಿ’ಸೋಜಾ ಆಗಮಿಸಿ, ಪ್ರಥಮ ಚಿಕಿತ್ಸೆ ಮತ್ತು ಸಿ.ಪಿ.ಆರ್ ಕುರಿತಾಗಿ ಮಾಹಿತಿ ಕಾರ್ಯಾಗಾರವನ್ನು ನಡೆಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಸಂತೋಷ್ ವಹಿಸಿಕೊಂಡಿದ್ದರು. ಯುವ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ಅವನೀಶ್.ಪಿ, ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಉಪನ್ಯಾಸಕಿಯರಾದ ಶಶಿಕಲಾ, ಅನುಶ್ರೀ ಮತ್ತು ಬೋಧಕಿ ಮಾಲತಿ ಸೇರಿದಂತೆ ಪ್ರಥಮ ವರ್ಷದ 60 ಸ್ವಯಂಸೇವಕರು ಈ ತರಬೇತಿಯ ಪ್ರಯೋಜನವನ್ನು ಪಡೆದರು.