ಧರ್ಮಸ್ಥಳ: ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಧರ್ಮಸ್ಥಳದಲ್ಲಿ ಅನ್ನದಾನ ಮಾಡಲಾಗುತ್ತದೆ. ಅಲ್ಲಿ 2ಸಾವಿರ ರೂಂ ಇದೆ. ಎಲ್ಲಾ ಕಾರ್ಯಚಟುವಟಿಕೆಯನ್ನು ಧರ್ಮಸ್ಥಳ ಆಡಳಿತ ಮಂಡಳಿ ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ.
ರಾಜ್ಯದಲ್ಲಿ 1 ಲಕ್ಷ 70 ಸಹಸ್ರ ದೇವಸ್ಥಾನಗಳಿವೆ. 35,515 ದೇವಸ್ಥಾನಗಳು ಮುಜರಾಯಿ ಇಲಾಖೆಗೆ ಬರುತ್ತದೆ. ಈ ವ್ಯಾಪ್ತಿಯಲ್ಲಿ ಧರ್ಮಸ್ಥಳ ದೇವಸ್ಥಾನ ಬರುವುದಿಲ್ಲವೆಂದು ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಸ್ಪಷ್ಟಪಡಿಸಿದ್ದಾರೆ.