ಬೆಳ್ತಂಗಡಿ: ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ ಉಜಿರೆ ಇದರ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು.
6ನೇ ಬಾರಿಗೆ ಅಧ್ಯಕ್ಷರಾಗಿ ಶ್ರೀಧರ ಜಿ. ಭಿಡೆ ಹಾಗೂ ದ್ವಿತೀಯ ಬಾರಿಗೆ ಉಪಾಧ್ಯಕ್ಷರಾಗಿ ಅನಂತ ಭಟ್ ಮಚ್ಚಿಮಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಪುತ್ತೂರು ಉಪಸಹಾಯಕ ನಿಬಂಧಕರಾದ ಎಂ. ರಘು ಕಾರ್ಯನಿರ್ವಹಿಸಿದ್ದರು.