ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದ ಪಿಜತ್ತಕಟ್ಟೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ನೇಮಕ ಹಾಗೂ ಅಧಿಕಾರ ಹಸ್ತಾಂತರ ಸೆ.14ರಂದು ಸಂಜೆ ಪಿಜತ್ತಕಟ್ಟೆಯಲ್ಲಿ ನೆರವೇರಿತು. ಸಮಿತಿಯ ಸದಸ್ಯರು ಹಾಗೂ ಭಕ್ತರ ಸೂಚನೆ ಮೇರೆಗೆ ಸಮಿತಿಯ ನೂತನ ಅಧ್ಯಕ್ಷರಾಗಿ ಹೋಟೆಲ್ ಉದ್ಯಮಿ, ಪೆರಾಡಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸುರೇಶ್ ಅಂಚನ್ ಅಟ್ಲಬೆಟ್ಟು, ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವನಾಥ್ ಬಂಗೇರ ಹಜಂಕಾನಿ, ಕೋಶಾಧಿಕಾರಿಯಾಗಿ ನಾರಾಯಣ ಸಾಲಿಯಾನ್ ಮೇಗಿನ ಹಿತ್ತಿಲು ಆಯ್ಕೆಯಾದರು.
ನಿಕಟ ಪೂರ್ವ ಅಧ್ಯಕ್ಷ ಉಮೇಶ್ ಕೋಟ್ಯಾನ್ ಹಾಗೂ ಕಾರ್ಯದರ್ಶಿ ಸುಪ್ರೀತ್ ಬಂಗೇರ ಲೆಕ್ಕ ಪತ್ರವನ್ನು ನೂತನ ಪದಾಧಿಕಾರಿಗಳಿಗೆ ಹಸ್ತಾಂತರಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಮುಂದಿನ 30ನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಸಮಿತಿಯ ಸದಸ್ಯರ ಸಮ್ಮುಖದಲ್ಲಿ ನಿರ್ಧರಿಸಲಾಯಿತು.