ಬೆಳ್ತಂಗಡಿ: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ 2024- 25 ನೇ ಸಾಲಿನ 64ನೇ ವಾರ್ಷಿಕ ಮಹಾಸಭೆ ಸೆ. 16ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಆಡಳಿತಾಧಿಕಾರಿ ಸ. ಸಂ. ಸ. ನಿ. ಪುತ್ತೂರು ಉಪ ವಿಭಾಗ ಎಸ್. ಎಂ. ರಘು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬ್ಯಾಂಕಿನ ಸದಸ್ಯರುಗಳಾದ ರಾಮಕೃಷ್ಣ ಗೌಡ, ಸೋಮನಾಥ ಬಂಗೇರ, ಈಶ್ವರ ಭಟ್ ಎಂ., ಪ್ರವೀಣ್ ಚಂದ್ರ ಜೈನ್, ಶುಭಕರ, ಶೀಲಾ, ಆಡಳಿತಾಧಿಕಾರಿ ಎಸ್. ಎಂ. ರಘು ಕಾರ್ಯಕ್ರಮ ಉದ್ಘಾಟಿಸಿ
16515 ಸದಸ್ಯರನ್ನು ಹೊಂದಿರುವ ಬ್ಯಾಂಕ್ ರೂ. 2,777.81 ಲಕ್ಷ ಒಟ್ಟು ಸಾಲ ಹೊರ ಬಾಕಿ ಇರುತ್ತದೆ. ನಬಾರ್ಡ್ ಸಾಲ ಯೋಜನೆಯಲ್ಲಿ ರೂ 699ಲಕ್ಷ ಮಂಜೂರಾತಿ ಸಲ್ಲಿಕೆ ಯಾಗಿದ್ದು ವರದಿ ಸಾಲಿನಲ್ಲಿ 700 ಲಕ್ಷ ಸಾಲ ವಿತರಿಸುವ ಯೋಜನೆ ಹೊಂದಿದೆ. ಈ ವರ್ಷ 2,693.20 ಲಕ್ಷ ಠೇವಣಿ ಸಂಗ್ರಹಣೆ ಇದ್ದು 2025-26 ನೇ ಸಾಲಿಗೆ 30 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ.
ಈ ಮಹಾಸಭೆ ಮಾಜಿ ಅಧ್ಯಕ್ಷರುಗಳ, ಮಾಜಿ ನಿರ್ದೇಶಕರ, ಎಲ್ಲಾ ಸದಸ್ಯರ ಸಹಕಾರ ದಿಂದ ಸುಖಕರ ಚರ್ಚೆ ಯೊಂದಿಗೆ ನಡೆದಿದೆ ಎಂದರು. ಪ್ರಭಾರ ವ್ಯವಸ್ಥಾಪಕ ಕೆ. ಗಿರಿಧರ ವರದಿ ವಾಚಿಸಿದರು. ಬ್ಯಾಂಕಿನ ಮಾಜಿ ಅಧ್ಯಕ್ಷರು, ಮಾಜಿ ನಿರ್ದೇಶಕರು, ಸದಸ್ಯರು ಹಾಜರಿದ್ದು ಸಲಹೆ ಸೂಚನೆ ನೀಡಿ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಿತು. ಸಿಬ್ಬಂದಿ ಸಂದೀಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ರೂಬನ್ ರಾಕೇಶ್ ಡಿಸೋಜ, ಪ್ರಶಾಂತ್ ಶೆಟ್ಟಿ, ಅಶ್ವಿನಿ, ಪ್ರಮೀಳಾ ಪ್ರಸಾದ್, ರೋಹನ್ ಕೋಟ್ಯಾನ್, ವಸಂತ ಪೂಜಾರಿ, ಹೇಮಾವತಿ, ಸಹಕರಿಸಿದರು.