ಪಡಂಗಡಿ: ಪಡಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ 2024-25ನೇ ಸಾಲಿನ ಸಾಮಾನ್ಯ ಸಭೆಯು ಸೆ.13ರಂದು ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ ಸುಂದರ ಪೂಜಾರಿ ಅಧ್ಯಕ್ಷತೆಯಲ್ಲಿ ಜರಗಿತು.

ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ರೂ. 14,56,846 ಲಾಭ ಗಳಿಸಿದೆ. ಸದಸ್ಯರಿಗೆ 65%ಬೋನಸ್, 25%ಡಿವಿಡೆಂಡ್ ನೀಡಲಾಗುವುದು ಎಂದರು. ದ.ಕ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್ ಮಾತನಾಡಿ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘವು ನಮ್ಮೆಲ್ಲರ ಕನಸಿನ ಕುಸಾಗಿದ್ದು ಸಂಘವು ಹೆಮ್ಮರವಾಗಿ ಬೆಳೆದಿದೆ. ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದೆ. ಆದುದರಿಂದ ಸದಸ್ಯರಿಗೆ ಉತ್ತಮ ಬೋನಸ್ ನೀಡುತ್ತಿದೆ ಎಂದರು. ಒಕ್ಕೂಟದಿಂದ ಹೆಚ್ಚಿನ ಸಿಗುವ ಸೌಲಭ್ಯ ಅನುದಾನ ಬಳಸಿಕೊಳ್ಳುವಂತೆ ವಿನಂತಿ ಮಾಡಿದರು.

ನಂದಿನಿ ಪಶು ಆಹಾರ ಬಳಸಿ ಇನ್ನಷ್ಟು ಅಭಿವೃದ್ಧಿಯಾಗಲಿ ಶುಭ ಹಾರೈಸಿದರು. ವಿಸ್ತರಣಾಧಿಕಾರಿ ಸುಚಿತ್ರಾ ಅವರು ಭಾಗವಹಿಸಿ ಪಶುಗಳ ಲಾಲನೆ ಪೋಷಣೆ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷ ಕೆ.ಸುಬ್ರಮಣ್ಯ ಭಟ್, ನಿರ್ದೇಶಕರಾದ ಮ್ಯಾಕ್ಷಿಮ್ ಸಿಕ್ವೆರಾ, ಶ್ರೀಧರ ಪೂಜಾರಿ, ಕುಂಜ್ಜಪ್ಪ ಮೂಲ್ಯ, ಪವಿತ್ರ, ಜಯರಾಜ್ ಬಿ., ದೇಜಪ್ಪ ಕೆ., ಬಾಜಿಲ್ ಫೆರ್ನಾಂಡಿಸ್, ವಸಂತ ಪೂಜಾರಿ, ಸುಂದರ ಪೂಜಾರಿ, ಅಣ್ಣು ನಾಯ್ಕ, ಪ್ರಸಾದ್, ಶ್ವೇತಾ, ಅಮಿತಾ ಉಪಸ್ಥಿತರಿದ್ದರು.

ಮೇಬಲ್ ಕ್ರಾಸ್ತಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಸಂಘದ ಸದಸ್ಯರುಗಳಾದ ಪ್ರಥಮ ಸುಜಾತಾ, ದ್ವಿತೀಯ ಪೀಟರ್ ಸಿಕ್ವೆರಾ ಅವರಿಗೆ ಉಡುಗೊರೆ ನೀಡಿ ಗೌರವಿಸಲಾಯಿತು. 2024-25ನೇ ಸಾಲಿನ ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಯಲ್ಲಿ ಶೇ 80%ಕಿಂತ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಸಿಬಂದಿಗಳಾದ ಹೊನ್ನಪ್ಪ ಕುಲಾಲ್, ಗುಲಾಬಿ, ಪ್ರವೀಣ್ ಮೋನಿಸ್ ಸಹಕರಿಸಿದರು. ನಿರ್ದೇಶಕ ಜಯರಾಜ್ ಸ್ವಾಗತಿಸಿ, ನಿವೃತ್ತ ಶಿಕ್ಷಕ ಶಿವಶಂಕರ್ ಭಟ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಮ್ಯಾಕ್ಷಿಮ್ ಸಿಕ್ವೆರಾ ವಂದಿಸಿದರು.