ಶಿಬಾಜೆ: ಓಂಕಾರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ ಸ. 15ರಂದು ಪೆರ್ಲದ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ಅಧ್ಯಕ್ಷೆ ಸುಕನ್ಯಾ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಓಂಕಾರ ಸಂಜೀವಿನಿ ತಂಡದ ಸದಸ್ಯರು ಭಾಗವಹಿಸಿದ್ದರು. ವೇದಿಕೆಯಲ್ಲಿ ವಲಯ ಮೇಲ್ವಿಚಾರಕಿ ವೀಣಾಶ್ರೀ, ಒಕ್ಕೂಟದ ಕಾರ್ಯದರ್ಶಿ ಹೊನ್ನಮ್ಮ,ಕೋಶಧಿಕಾರಿ ಶೀಲಾ, ಉಪಾಧ್ಯಕ್ಷೆ ಶೀಲಾವತಿ ಹಾಗೂ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಎಂ.ಬಿ.ಕೆ ಪಾವನ ವಾರ್ಷಿಕ ವರದಿ ಮಂಡಿಸಿದ್ದು ಸಿ ಎ ಅಡಿಟ್ ಮಂಡನೆಯನ್ನು ಪಶುಸಖಿ ದಿವ್ಯಾ ವಾಚಿಸಿದರು. ಒಕ್ಕೂಟದ ಸದಸ್ಯರಿಗೆ ಅಂಚೆ ಪಾಲಕ ವಿಶ್ವನಾಥ್ ಶೆಂಡ್ಯೆ ಇಲಾಖೆಗಳಿಂದ ಸಿಗುವ ಸಕಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ್ದು ಜೊತೆಗೆ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಮ್ಯಾನೇಜರ್ ವಂದನ್ ಅವರು ಬ್ಯಾಂಕ್ ನಿಂದ ಸಿಗುವ ಸೌಲಭ್ಯಗಳ ಮಾಹಿತಿಯನ್ನು ಸದಸ್ಯರಿಗೆ ನೀಡಿದರು. ಗ್ರಾಮ ಅರೋಗ್ಯ ಅಧಿಕಾರಿ ಲಲಿತ ಅವರು ಪೌಷ್ಟಿಕ ಆಹಾರಗಳ ಬಗ್ಗೆ ಮತ್ತು ಸ್ವಚ್ಛತೆಯ ಕುರಿತು ಒಕ್ಕೂಟದ ಸದಸ್ಯರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಲ್.ಸಿ.ಆರ್.ಪಿ ಗೀತಾ ಅಥಿತಿಗಳನ್ನು ಸ್ವಾಗತಿಸಿ, ಮಾಲತಿ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಸಖಿ ಜಯಂತಿ ಧನ್ಯವಾದವಿತ್ತರು.