ಉಜಿರೆ: ಸದಾ ಕೌಶಲ್ಯಭರಿತ ಶಿಕ್ಷಣಕ್ಕೆ ಆದ್ಯತೆ ನೀಡುವ ಸಂಸ್ಥೆಯ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ, ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಕೇವಲ ಥಿಯರಿ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ, ಪ್ರಾಯೋಗಿಕ ಜ್ಞಾನವನ್ನೂ ಗಾಢವಾಗಿ ಅರಿತು ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುವ ಉದ್ದೇಶದಿಂದ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗವು “ರೋಬೊ ರೇಸ್ -2025” ಎಂಬ ತಾಂತ್ರಿಕ ಸ್ಪರ್ಧೆಯನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.
ಕಾಲೇಜಿನ ಪ್ರಾಂಶುಪಾಲ ಸಂತೋಷ್ ರೋಬೋ ರೇಸ್ ಕಾರನ್ನು ಚಾಲನೆ ಮಾಡುವುದರ ಮೂಲಕ ಉದ್ಘಾಟಿಸಿದರು. ಕಾಲೇಜಿನ 25 ತಂಡಗಳು ಭಾಗವಹಿಸಿದ್ದು, ಕಾಲೇಜಿನ ವಿದ್ಯಾರ್ಥಿಗಳೇ ಸುಮಾರು 100 ಮೀ ಉದ್ದದ ಟ್ರ್ಯಾಕ್ ತಯಾರಿಸಿದ್ದರು. 10 ವಿವಿಧ ಅಡೆತಡೆಗಳನ್ನು ಹೊಂದಿದ್ದ ಟ್ರ್ಯಾಕ್ ನಲ್ಲಿ ಮಣ್ಣು, ಮರಳು, ಕಲ್ಲು, ಏರಿಳಿತ, ನೇತಾಡುವ ಸೇತುವೆ, ಎಣ್ಣೆಯನ್ನು ಬಳಸಿ ಜಾರುವ ರೀತಿಯ ವ್ಯವಸ್ಥೆಯನ್ನು ಮಾಡಿದ್ದು ವಿಶೇಷವಾಗಿತ್ತು. ಕಾಲೇಜಿನ ವ್ಯವಸ್ಥಾಪಕ ಚಂದ್ರನಾಥ್ ಜೈನ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥೆ ಮೇರಿ ಸ್ಮಿತಾ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.