ಕುತ್ಲೂರು: ಸುಜ್ಞಾನ ನಿಧಿ ಸ್ಕಾಲರ್ ಶಿಪ್ ಮಂಜೂರಾತಿ ಪತ್ರ ವಿತರಣೆ ಕುತ್ಲೂರು ಕಾರ್ಯಕ್ಷೇತ್ರದ ಎ ಒಕ್ಕೂಟದ ಶಿವಶಕ್ತಿ ಗುಂಪಿನ ಸದಸ್ಯ ಕರಿಯ ಪೂಜಾರಿ ಅವರ ಮಗಳಾದ ವೇದಾವತಿ ಅವರಿಗೆ ಸುಜ್ಞಾನ ನಿಧಿ ಮಂಜೂರಾತಿ ಪತ್ರವನ್ನು ವಲಯ ಸಂಚಾಲಕ ವಸಂತ್ ಭಟ್ ಅವರು ವಿತರಣೆ ಮಾಡಿದರು.
ನಾರಾವಿ ವಲಯದಲ್ಲಿ 40 ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಸುಜ್ಞಾನ ನಿಧಿ ಬರುತ್ತಿದ್ದು ಈ ವರ್ಷದಲ್ಲಿ 13 ಹೊಸ ವಿದ್ಯಾರ್ಥಿಗಳಿಗೆ ಮಂಜೂರಾತಿ ಆಗಿರುತ್ತದೆ. ಕುತ್ಲೂರು ಎ ಒಕ್ಕೂಟದ ಅಧ್ಯಕ್ಷ ಸಂತೋಷ್ ಪೂಜಾರಿ ಹಾಗೂ ಬಿ ಒಕ್ಕೂಟದ ಅಧ್ಯಕ್ಷ ಏಕನಾಥ ಪೂಜಾರಿ, ವಲಯ ಮೇಲ್ವಿಚಾರಕಿ ವಿಶಾಲ ಕೆ., ಸೇವಾಪ್ರತಿನಿಧಿ ಉಷಾ ಸಂತೋಷ್, ಯೋಜನೆಯ ಹಿರಿಯ ಸದಸ್ಯ ಡಾಕಯ್ಯ ಪೂಜಾರಿ, ಮಾಜಿ ಸೇವಾಪ್ರತಿನಿಧಿ ಕೇಶವ, ಬಿ ಒಕ್ಕೂಟದ ಪದಾಧಿಕಾರಿಗಳಾದ ಸುಧಾಕರ, ಕುಶಾಲ, ನವೀನ್, ಯೋಗೀಶ್, ಸುರೇಂದ್ರ ಎ., ಒಕ್ಕೂಟದ ಪದಾಧಿಕಾರಿ ಅರುಣಾ ನಿಕಟ ಪೂರ್ವ ಅಧ್ಯಕ್ಷ ಕರಿಯ ಪೂಜಾರಿ, ಉಪಾಧ್ಯಕ್ಷೆ ಜಯಂತಿ ಬಿ. ಒಕ್ಕೂಟದ ತ್ರೈಮಾಸಿಕ ಸಭೆಗೆ ಆಗಮಿಸಿದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.