ನೇತ್ರಾವತಿ: ಸ್ನಾನಘಟ್ಟದ ಸಮೀಪದ ಬಂಗ್ಲೆಗುಡ್ಡೆಯಲ್ಲಿ ಸೆ.10ರಂದು ಮತ್ತೆ ಮಹಜರು ಕಾರ್ಯವನ್ನು ಎಸ್. ಐ. ಟಿ ಅಧಿಕಾರಿಗಳು ನಡೆಸಿದ್ದಾರೆ.
ಸೌಜನ್ಯ ಮಾವ ವಿಠಲ ಗೌಡನನ್ನು ಎಸ್. ಐ. ಟಿ ಅಧಿಕಾರಿಗಳು ಸೆ.10ರಂದು ಸಂಜೆ 4ಗಂಟೆ ಸುಮಾರಿಗೆ ಬಂಗ್ಲೆಗುಡ್ಡೆಗೆ ಕರೆತಂದಿದ್ದು, ಎಸ್. ಐ ಟಿ ಎಸ್ ಪಿ ಸೈಮನ್ ನೇತೃತ್ವದಲ್ಲಿ ಮಹಜರು ಕಾರ್ಯ ನಡೆಯಿತು.
ಸುಮಾರು ಒಂದು ಗಂಟೆಗಳ ಕಾಲ ಮಹಜರು ಪ್ರಕ್ರಿಯೆ ನಡೆಯಿತು. ಅಧಿಕಾರಿಗಳು ಮುಖ್ಯರಸ್ತೆಯಿಂದ 50 ಮೀಟರ್ ಮೇಲ್ಭಾಗದಲ್ಲಿ ಸ್ಥಳ ಮಹಜರು ನಡೆದಿದ್ದು,ಕೆಲವೇ ದಿನಗಳಲ್ಲಿ ಉತ್ಖನನ ಕಾರ್ಯ ನಡೆಯುವ ಸಾಧ್ಯತೆಯಿದೆ.