ಶ್ರೇಷ್ಠ ಗುರಿಯನ್ನು ತೋರಿಸುವ ಕೆಲಸ ಶಿಕ್ಷಕರಿಂದ ಆಗಬೇಕು: ಫಾ. ವಾಲ್ಟರ್ ಡಿಮೆಲ್ಲೋ

0

ಬೆಳ್ತಂಗಡಿ: “ಶ್ರೇಷ್ಠ ಗುರಿಯನ್ನು ತೋರಿಸಿ, ಜ್ಞಾನವನ್ನು ಹಂಚುವ ಕೆಲಸ ಶಿಕ್ಷಕರಿಂದ ಆಗಬೇಕು” ಎಂದು ಶಾಲಾ ಸಂಚಾಲಕ ಗುರುಗಳು ವೋಲ್ಟರ್ ಡಿಮೆಲ್ಲೋ ಅವರು ಹೇಳಿದರು. ಅವರು ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆ.6ರಂದು ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿ ನುಡಿದರು.

“ಮಕ್ಕಳು ಶಿಕ್ಷಕರಿಗೆ ವಿಧೇಯರಾಗಿ ಉತ್ತಮ ಶಿಕ್ಷಣ ಪಡೆದು ಸಾಧಕರಾಗಬೇಕು” ಎಂದು ಶಾಲಾ ಮುಖ್ಯೋಪಾಧ್ಯಾಯ ಗುರು ಕ್ಲಿಫರ್ಡ್ ಪಿಂಟೋ ಅವರು ಹೇಳಿದರು. ವೇದಿಕೆಯಲ್ಲಿ ಶಾಲಾ ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷ ರಿಚರ್ಡ್ ಸಿಕ್ವೇರಾ ಅವರು ಉಪಸ್ಥಿತರಿದ್ದರು.

ಶಿಕ್ಷಕರ ದಿನಾಚರಣೆಯ ಪ್ರಯುಕ್ತ 10ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರಿಗೆ ಅನೇಕ ಆಟೋಟ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಶಿಕ್ಷಕರನ್ನು ಮನರಂಜಿಸಿದರು.

ವಿದ್ಯಾರ್ಥಿಗಳಾದ ಸಾನ್ವಿ ರಾಧಾಕೃಷ್ಣನ್ ಅವರ ಜೀವನ ಸಾಧನೆಗಳನ್ನು ಪರಿಚಯಿಸಿ, ರಂಶಿ ಹಾಗೂ ಸುಧನ್ವ ಅವರು ಶಿಕ್ಷಕರೊಂದಿಗಿನ ತಮ್ಮ ಪ್ರೀತಿಯ ಒಡನಾಟದ ಬಗ್ಗೆ ನುಡಿದರು. ತ್ರಿಶಾ ಸ್ವಾಗತಿಸಿ, ಪ್ರಜ್ಞಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಹ ಶಿಕ್ಷಕಿ ಬ್ಲೆಂಡಿನ್ ರೋಡ್ರಿಗಸ್ ಸಹಕರಿಸಿದರು. ಪ್ರದ್ಯೋತ್ ವಂದಿಸಿದರು.

LEAVE A REPLY

Please enter your comment!
Please enter your name here